Friday, April 11, 2025
Google search engine

Homeಸ್ಥಳೀಯಕೋರ್ಟ್ ಗಳು ಸಹ ಕೇಂದ್ರ ಹೇಳಿದಂತೆ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ : ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿ

ಕೋರ್ಟ್ ಗಳು ಸಹ ಕೇಂದ್ರ ಹೇಳಿದಂತೆ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ : ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿ

ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಅವರು ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದರು. ಅಲ್ಲದೆ ಇಡಿ ಅಧಿಕಾರಿಗಳು ಸಹ ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದರು. ಈ ವಿಚಾರವಾಗಿ ಯತಿಂದ್ರ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದೀಗ ಕೋರ್ಟ್ ಗಳು ಸಹ ಕೇಂದ್ರ ಸರ್ಕಾರ ಹೇಳಿದಂತೆ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.

ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು , ಕೋರ್ಟ್ಗಳು ಸಹ ಕೇಂದ್ರದ ಮಾತನ್ನು ಕೇಳುವ ಪರಿಸ್ಥಿತಿ ಬಂದಿದೆ. ನಾವು ತಪ್ಪು ಮಾಡಿಲ್ಲ ನಮಗೆ ತನಿಖೆಯ ಬಗ್ಗೆ ಯಾವುದೇ ಭಯ ಇಲ್ಲ. ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮೈಸೂರು ಜಿಲ್ಲೆಯ ಎಚ್ ಡಿ ಕೋಟೆಯಲ್ಲಿ ಡಾ.ಯತಿಂದ್ರ ಹೇಳಿಕೆ ನೀಡಿದರು.

ಇಡಿ, ಸಿಬಿಐ, ಐಟಿ ಎಲ್ಲವೂ ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿವೆ. ಎಲ್ಲ ಸಂಸ್ಥೆಗಳು ಅದರ ನಿಯಂತ್ರಣದಲ್ಲಿವೆ. ಕೇಂದ್ರ ಸರ್ಕಾರ ಏನು ಹೇಳುತ್ತದೆ ಅದೇ ರೀತಿ ತನಿಖೆ ಮಾಡುತ್ತಿದ್ದಾರೆ. ಕೋರ್ಟ್ ಗಳು ಕೂಡ ಕೇಂದ್ರ ಹೇಳುವ ರೀತಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯಪಾಲರು ನಮ್ಮ ಮುಖ್ಯಮಂತ್ರಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತ ಹೇಳಿ ಅನುಮತಿ ಕೊಟ್ಟರು.

ಆದರೆ ಹಲವು ನ್ಯಾಯಾಧೀಶರು ಆ ರೀತಿ ತನಿಖೆ ಇಲ್ಲದೆ ಆ ರೀತಿ ಅನುಮತಿ ಕೊಡುವುದಕ್ಕೆ ಸಾಧ್ಯವಿಲ್ಲ ಆದರೂ ಕೂಡ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಬಿಜೆಪಿ ಜೆಡಿಎಸ್ ನಾಯಕರು ಕೂಡ ಭ್ರಷ್ಟಾಚಾರ ಮಾಡಿದ್ದಾರೆ. ಆದರೆ ರಾಜ್ಯಪಾಲರು ಕೂಡ ಯಾವುದೇ ರೀತಿಯಾಗಿ ಕ್ರಮ ಕೈಗೊಂಡಿಲ್ಲ. ಈ ಒಂದು ತನಿಖೆ ಆಗುತ್ತಿರುವುದನ್ನು ನೋಡಿದರೆ ಕೇವಲ ಪ್ರಶ್ನೆ ಮಾಡದವರು ಇಲ್ಲದಿದ್ದರೆ ಅವರು ಆಡಿದ್ದೇ ಆಟವಾಗಿದೆ. ಸುಳ್ಳು ಆರೋಪದಡಿ ಮುಖ್ಯಮಂತ್ರಿ ಅವರನ್ನು ಸಿಲುಕಿಸಿ ಅಧಿಕಾರಿಂದ ಕೇಳಿಸಲು ವಿಪಕ್ಷಗಳು ಹುನ್ನಾರ ಮಾಡಿವೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular