ಮಂಡ್ಯ: ಎಂಪಿ ಎಲೆಕ್ಷನ್ ಗಾಗಿ ಓಲೈಕೆ ರಾಜಕಾರಣ ಶುರುವಾಗಿದ್ದು, ಕೃಷಿ ಸಚಿವರ ಓಲೈಕೆಗೆ ಸುಮಲತಾ ಅಂಡ್ ಟೀಂ ಮುಂದಾಗಿದ್ದಾರಾ? ಎಂಬ ಅನುಮಾನ ವ್ಯಕ್ತವಾಗಿದೆ.
ಸೈಲೆಂಟ್ ಆಗಿಯೇ ಕಾಂಗ್ರೆಸ್ ಗೆ ಜಂಪ್ ಆಗಲು ಸಂಸದೆ ಹಾಗೂ ಬೆಂಬಲಿಗರು ನಿರ್ಧರಿಸಿದ್ದಾರಾ ಎಂಬ ಶಂಕೆ ಕಾಡಿದೆ.
ಭ್ರಷ್ಟಚಾರ ಆರೋಪ ಹಿನ್ನಲೆ ಕೃಷಿ ಸಚಿವ ಚಲುವರಾಯಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಮಂಡ್ಯದಲ್ಲಿ ಅಹೋರಾತ್ರಿ ಧರಣಿಯನ್ನು ಬಿಜೆಪಿ ನಡೆಸಿತ್ತು.
ಈ ನಡುವೆಯು ಸುಮಲತಾ ಆಪ್ತರು ಚಲುವರಾಯಸ್ವಾಮಿ ಪರ ಬ್ಯಾಟ್ ಬೀಸುತ್ತಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವಿಗೆ ಚಲುವರಾಯಸ್ವಾಮಿ ಪ್ರಮುಖ ಪಾತ್ರವಹಿಸಿದ್ದರು. ಈ ಹಿನ್ನಲೆ ಈ ಬಾರಿಯು ಕೃಷಿ ಸಚಿವರ ಬೆಂಬಲದ ನಿರೀಕ್ಷೆಯಲ್ಲಿ ಸುಮಲತಾ ಇದ್ದಾರಾ ಎಂಬ ಗುಮಾನಿ ಜಿಲ್ಲೆಯಲ್ಲಿ ಕಾಡುತ್ತಿದೆ.
ಸುಮಲತಾ ಬೆಂಬಲಿಗ ಬೇಲೂರು ಸೋಮಶೇಖರ್, ಸಚಿವ ಚಲುವರಾಯಸ್ವಾಮಿ ಪರ ಬ್ಯಾಟಿಂಗ್ ಗೆ ನಿಂತಿದ್ದಾರೆ.
ಕೃಷಿ ಸಚಿವರ ವಿರುದ್ದ ಆರೋಪ ಮಾಡ್ತಿರುವ ಜೆಡಿಎಸ್ ಮಾಜಿ ಶಾಸಕ ಸುರೇಶಗೌಡ ವಿರುದ್ಧ ವೇ ಸಂಸದೆ ಆಪ್ತ ಬೇಲೂರು ಸೋಮಶೇಖರ್ ಕಿಡಿ ಕಾರಿದ್ದು, ವೈಯುಕ್ತಿಕ ಹಾಗೂ ದ್ವೇಷದ ರಾಜಕಾರಣಕ್ಕೆ ಕೈ ಹಾಕಿದ್ದೀರಾ. ಕ್ಷುಲ್ಲಕ ರಾಜಕಾರಣದ ಮೂಲಕ ಸಚಿವರ ಹೆಸರು ಹಾಳು ಮಾಡಲಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಸುಳ್ಳು ಹಾಗೂ ನಕಲಿ ಪತ್ರಗಳ ಮೂಲಕ ದ್ವೇಷದ ರಾಜಕೀಯ ಮಾಡಬೇಡಿ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಒಗ್ಗಟ್ಟಿನ ರಾಜಕೀಯ ಮಾಡಿ ಎಂದು ಪರೋಕ್ಷವಾಗಿ ಜೆಡಿಎಸ್ ಹಾಗೂ ಮಂಡ್ಯ ಬಿಜೆಪಿಗು ಬೇಲೂರು ಸೋಮಶೇಖರ್ ತಿಳಿ ಹೇಳಿದ್ದಾರೆ.