Thursday, April 17, 2025
Google search engine

HomeUncategorizedರಾಷ್ಟ್ರೀಯಕೊವಿಡ್: ನಟ, ರಾಜಕಾರಣಿ ವಿಜಯಕಾಂತ್ ನಿಧನ

ಕೊವಿಡ್: ನಟ, ರಾಜಕಾರಣಿ ವಿಜಯಕಾಂತ್ ನಿಧನ

ಚೆನ್ನೈ: ನಟ ಹಾಗೂ ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್ ಅವರು 71ನೇ ವಯಸ್ಸಿಗೆ ನಿಧನ ಹೊಂದಿದ್ದಾರೆ.

ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಕೆಲ ದಿನಗಳಿಂದ ಅವರು ವೆಂಟಿಲೇಟರ್ ಸಹಾಯದಲ್ಲಿ ಇದ್ದರು. ಈಗ ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತಪಟ್ಟಿದ್ದಾರೆ.

‘ವಿಜಯಕಾಂತ್ ಅವರನ್ನು ವೆಂಟಿಲೇಟರ್ ಸಹಾಯದಲ್ಲಿ ಇಡಲಾಗಿತ್ತು. ಆದರೆ, ಎಷ್ಟೇ ಪ್ರಯತ್ನಿಸಿದರೂ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ. ಡಿಸೆಂಬರ್ 28ರ ಬೆಳಿಗ್ಗೆ ಅವರು ನಿಧನ ಹೊಂದಿದರು’ ಎಂದು ಆಸ್ಪತ್ರೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯಕಾಂತ್ ಅವರನ್ನು ಮಂಗಳವಾರ (ಡಿಸೆಂಬರ್ 26) ಸಾಮಾನ್ಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ‘ವಿಜಯ್ ಅವರು ಆರೋಗ್ಯವಾಗಿದ್ದಾರೆ. ಇದೊಂದು ಸಾಮಾನ್ಯ ಪರೀಕ್ಷೆ. ಅವರು ಶೀಘ್ರವೇ ಮನೆಗೆ ಮರಳಲಿದ್ದಾರೆ’ ಎಂದು ಡಿಎಂಡಿಕೆ ಪಕ್ಷದವರು ಹೇಳಿದ್ದರು.

ಆ ಬಳಿಕ ಅವರಿಗೆ ಕೊವಿಡ್ ಇರುವ ವಿಚಾರ ದೃಢವಾಯಿತು. ಅವರ ಸಾವಿನ ಸುದ್ದಿ ಪಕ್ಷದವರಿಗೆ ಹಾಗೂ ಅಭಿಮಾನಿಗಳಿಗೆ ಶಾಕ್ ನೀಡಿದೆ. ಈ ಮೊದಲು ನವೆಂಬರ್ 20ರಂದು ವಿಜಯಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು.

ವಿಜಯಕಾಂತ್ ಅವರು 1952ರಲ್ಲಿ ಮದುರೈನಲ್ಲಿ ಜನಿಸಿದರು. ಅವರು 80ರ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದರು. 150ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2009ರ ಈಚೆಗೆ ಅವರು ಚಿತ್ರರಂಗದಿಂದ ದೂರ ಆಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದರು. ಪ್ರೇಮಲತಾ ಅವರನ್ನು ವಿಜಯಕಾಂತ್ 1990ರಲ್ಲಿ ಮದುವೆ ಆದರು. ಇವರಿಗೆ ಇಬ್ಬರು ಮಕ್ಕಳು.

2005ರಲ್ಲಿ ವಿಜಯಕಾಂತ್ ಅವರು ಡಿಎಂಡಿಕೆಯನ್ನು ಸ್ಥಾಪಿಸಿದರು. ಚೆನ್ನೈನಲ್ಲಿ ಈ ಪಕ್ಷದ ಮುಖ್ಯ ಕಚೇರಿ ಇದೆ. ಆ ಬಳಿಕ ಅವರು ಸಿನಿಮಾ ಕಡೆ ಹೆಚ್ಚು ಒಲವು ತೋರಿಸಲಿಲ್ಲ. ಅವರು ಎರಡು ಬಾರಿ ವಿಧಾನಸಭಾ ಸದಸ್ಯರಾಗಿದ್ದರು. 2011ರಿಂದ 2016ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿದ್ದರು. ಅವರ ಆರೋಗ್ಯ ಇತ್ತೀಚೆಗೆ ಹದಗೆಟ್ಟಿದ್ದರಿಂದ ರಾಜಕೀಯದಲ್ಲೂ ಆ್ಯಕ್ಟೀವ್ ಆಗಿರಲಿಲ್ಲ.

RELATED ARTICLES
- Advertisment -
Google search engine

Most Popular