Friday, April 11, 2025
Google search engine

Homeರಾಜ್ಯಕೋವಿಡ್ ಹಗರಣ ತನಿಖೆ ವಿಚಾರ : ವರದಿ ಆಧಾರದ ಮೇಲೆ ತನಿಖೆ ಮಾಡುತ್ತೇವೆ: ಡಿಕೆ...

ಕೋವಿಡ್ ಹಗರಣ ತನಿಖೆ ವಿಚಾರ : ವರದಿ ಆಧಾರದ ಮೇಲೆ ತನಿಖೆ ಮಾಡುತ್ತೇವೆ: ಡಿಕೆ ಶಿವಕುಮಾರ್

ಬೆಂಗಳೂರು : ಕೋವಿಡ್ ಹಗರಣದ ತನಿಖೆಗೆ ಸಂಬಂಧಪಟ್ಟಂತೆ ನ್ಯಾ.ಕುನ್ಹಾ ವರದಿಗೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ಸಭೆ ನಡೆಯಿತು. ಸಭೆ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾತನಾಡಿ, ವರದಿಯ ಆಧಾರದ ಮೇಲೆ ನಾವು ತನಿಖೆ ಮಾಡುತ್ತೇವೆ ಎಂದು ತಿಳಿಸಿದರು.

ಸಂಪುಟ ಉಪ ಸಮಿತಿ ಸಭೆಯ ಅಂತ್ಯವಾದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಭೆಯಲ್ಲಿ ನ್ಯಾ.ಕುನ್ಹಾ ಮಧ್ಯಂತರ ವರದಿ ಪರಿಶೀಲನೆ ಮಾಡಿದ್ದೇವೆ. ವರದಿ ಶಿಫಾರಸಿನ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಹೇಳಿದ್ದಾರೆ. ಎಫ್ಐಆರ್ ಸೇರಿದಂತೆ ಪ್ರತಿಯೊಂದು ವಿಚಾರಣೆ ಮಾಡಬಹುದು. ಹಿಂದೆ ಚಾಮರಾಜನಗರಕ್ಕೂ ನಾನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದೆವು ಮುಂದೆ ಬೆಳಗಾವಿಯಲ್ಲಿ ಸಂಪುಟ ಸಮಿತಿ ಸಭೆ ಮಾಡುತ್ತೇವೆ.

ಬಿಬಿಎಂಪಿಯ ವ್ಯಾಪ್ತಿಯಲ್ಲಿ 84 ಲಕ್ಷ ಆರ್ಟಿಪಿಸಿಆರ್ ಟೆಸ್ಟ್ ಮಾಡಿದ್ದಾರೆ 84 ಲಕ್ಷ ಆರ್ ಟಿ ಪಿ ಸಿ ಆರ್ ಟೆಸ್ಟಿಗೆ 500 ಕೋಟಿ ರೂಪಾಯಿ ಆಗಿದೆ. ಈ ಸಂಬಂಧ 400 ಕೋಟಿ ಹಣ ಪಾವತಿ ಮಾಡಿದ್ದಾರೆ. ಕಿದ್ವಾಯಿಯಲ್ಲಿ ಒಂದೇ ದಿನ 24 ಲಕ್ಷ ಜನರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿದ್ದಾರೆ. ಅಧಿಕಾರಿಗಳೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾರೆಲ್ಲ ಸಹಿ ಮತ್ತು ಆದೇಶ ಕೊಟ್ಟಿದ್ದಾರೋ ಪರಿಶೀಲನೆ ಮಾಡುತ್ತಿದ್ದೇವೆ. ಕಾನೂನುಬಾಹಿರವಾಗಿ ಏನೇನೋ ಆಗಿದೆಯೋ ಎಲ್ಲವನ್ನು ಪರಿಶೀಲಿಸುತ್ತೇವೆ.

ಕೆಲವು ಹಿರಿಯ ಮತ್ತು ನಿವೃತ್ತಾ ಅಧಿಕಾರಿಗಳನ್ನು ಮಾಹಿತಿಗಾಗಿ ಬಳಸಿಕೊಳ್ಳುತ್ತೇವೆ.ಯಾವ ರೀತಿಯಲ್ಲಿ ಕಾನೂನು ಕ್ರಮ ಎಂದು ನಿರ್ಧರಿಸಲಾಗುತ್ತದೆ. ಕ್ರಿಮಿನಲ್ ನಡೆದಿದ್ದರೆ ಅದು ವಿಚಾರಣೆ ಆಗಲಿದೆ. ಯಾರ್ಯಾರು ಸಹಿ ಹಾಕಿದ್ದಾರೆ ಎಲ್ಲರೂ ತನಿಖೆ ಆಗುತ್ತದೆ. ವರದಿಯ ಆಧಾರದ ಮೇಲೆ ನಾವು ತನಿಖೆ ಮಾಡುತ್ತೇವೆ ಯಾವ ರೀತಿಯಲ್ಲಿ ಕಾನೂನು ಕ್ರಮ ಎಂದು ನಿರ್ಧಾರವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

RELATED ARTICLES
- Advertisment -
Google search engine

Most Popular