ಹನಗೋಡು : ಹನಗೋಡು ಹೋಬಳಿಯ ಕಲ್ಲಹಳ್ಳಿಯಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ. ಕಲ್ಲಹಳ್ಳಿ ಗ್ರಾಮದ ಚಂದ್ರಶೇಖರ್ ಎಂಬುವವರಿಗೆ ಸೇರಿದ ಹಸುವನ್ನು ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ವೇಳೆ ಮುತ್ತುರಾಯನ ಹೊಸಹಳ್ಳಿ ಅರಣ್ಯ ಪ್ರದೇಶದಿಂದ ಧಾವಿಸಿದ ಹುಲಿಯು ಹಸುವನ್ನು ಕೊಂದು ಹಾಕಿದೆ.
ಸುಮಾರು ೫೦ಸಾವಿರ ಬೆಲೆ ಬಾಳುವ ಹಸು ಇದಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಹನಗೋಡು ಭಾಗದಲ್ಲಾಯ್ತು ಇದೀಗ ಕಲ್ಲಹಳ್ಳಿ ಬಾಗದಲ್ಲೂ ಹುಲಿ ದಾಳಿ ಮುಂದುವರೆದಿದ್ದು, ಹುಲಿ ಕಾಟ ತಪ್ಪಿಸುವಂತೆ ಹಾಗೂ ಸಂಕಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಮನವಿ ಮಾಡಿದ್ದಾರೆ.