ಮಂಡ್ಯ: ಸಾರ್ವಜನಿಕ ಅಪರಾಧಗಳಿಗೆ ಕಡಿವಾಣ ಹಾಕುವ ಸಲುವಾಗಿ ಮಂಡ್ಯ ಸಂಚಾರಿ ಠಾಣಾ ಪೊಲೀಸರು ವಿನೂತನ ಕಾರ್ಯ ಆರಂಭಿಸಿದ್ದು, ಮಂಡ್ಯ ನಗರ ವ್ಯಾಪ್ತಿಯಲ್ಲಿ ಪರ್ಮಿಟ್ ಆಟೋಗಳಿಗೆ ನೋಂದಣಿ ನಂಬರ್ ಹಾಕಿ, ಪರ್ಮಿಟ್ ಇಲ್ಲದ ಆಟೋಗಳಿಗೆ ಕಡಿವಾಣ ಹಾಕಿದ್ದಾರೆ.
ದಾಖಲಾತಿ ಸರಿ ಇರುವ ಆಟೋಗಳಿಗೆ ಅಧಿಕೃತ ಡಿಜಿಟಲ್ ನಂಬರ್ ಒದಗಿಸಲಾಗಿದೆ. ಮಂಡ್ಯ ನಗರ ವ್ಯಾಪ್ತಿಯ ಪರ್ಮಿಟ್ ಇರುವ 361 ಆಟೋಗಳಿಗೆ ಡಿಜಿಟಲ್ ಕಾರ್ಡ್ ನೀಡಲಾಗಿದೆ.
ಮಂಡ್ಯ ನಗರ ಪರ್ಮಿಟ್ ಹೊಂದಿರುವ ಆಟೋಗಳಿಗೆ ಡಿಸ್ ಪ್ಲೇ ಕಾರ್ಡ್ ಹಾಕಿದ್ದು, ರ್ವಜನಿಕರಿಗೆ ಕಾಣುವಂತೆ ಆಟೋ ಚಾಲಕನ ಮಾಹಿತಿ ಇರಲಿದೆ.
ಆಟೋಗಳಿಗೆ ಡಿಜಿಟಲ್ ನಂಬರ್ ವಿತರಣೆಗೆ ಸಂಜಯ್ ವೃತ್ತದಲ್ಲಿ ಮಂಡ್ಯ ಎಸ್ ಪಿ ಎನ್.ಯತೀಶ್ ಚಾಲನೆ ನೀಡಿದ್ದಾರೆ.
ಇದೇ ವೇಳೆ ಎಎಸ್ ಪಿ ತಿಮ್ಮಯ್ಯ, ಡಿವೈಎಸ್ ಪಿ ಶಿವಮೂರ್ತಿ, ಸಿಪಿಐ ಜಾನ್ ಆಂಥೋನಿ, ಪಿಎಸ್ ಐ ಕಮಲಾಕ್ಷಿ, ಪಿಎಸ್ ಐ ಮಂಜುನಾಥ್, ಭಾಗಿಯಾಗಿದ್ದಾರೆ.