Saturday, April 19, 2025
Google search engine

Homeರಾಜ್ಯಸುದ್ದಿಜಾಲಸುಳ್ಳು ಮರಣ ದೃಢೀಕರಣ ಪತ್ರ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಜಮೀನು ಖಾತೆ ಬದಲಾವಣೆ:ರೈತನ ಅಳಲು

ಸುಳ್ಳು ಮರಣ ದೃಢೀಕರಣ ಪತ್ರ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಜಮೀನು ಖಾತೆ ಬದಲಾವಣೆ:ರೈತನ ಅಳಲು

ವರದಿ: ಎಡತೊರೆ ಮಹೇಶ್

ಎಚ್.ಡಿ.ಕೋಟೆ: ವಿದ್ಯಾಬುದ್ಧಿ ಇಲ್ಲದ ಅವಿದ್ಯಾವಂತ ನಾನು, ನನಗಿದ್ದ ೩ ಎಕರೆ ಜಮೀನನ್ನು ಹಂಪಾಪುರ ವಿಎ ಮತ್ತಿತರ ಅಧಿಕಾರಿಗಳು ಸುಳ್ಳುದಾಖಲೆ ಸೃಷ್ಟಿಸಿ, ಬದುಕಿರುವ ನನ್ನನ್ನು ದಾಖಲೆಗಳಲ್ಲಿ ಸಾಯಿಸಿ ನನ್ನ ಜಮೀನು ಬೇರೆಯವರಿಗೆ ಖಾತೆ ಬದಲಾವಣೆ ಮಾಡಿದ್ದಾರೆ. ದಯವಿಟ್ಟು ನನ್ನ ಜಮೀನು ನನಗೆ ಕೊಡಿಸಿ ಎಂದು ರೈತ ಮೋರಿ ನಿಂಗಯ್ಯ ಪತ್ರಕರ್ತರೆದುರು ಕಣ್ಣೀರಿಟ್ಟರು.

ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಕತ್ರಕರ್ತ ಸಂಘದ ಕಚೇರಿಯಲ್ಲಿ ಪತ್ರಿಕೋಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೋರಿನಿಂಗಯ್ಯ ನಾನು ಎಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿ ನಿವಾಸಿ. ನನಗೆ ಇಬ್ಬರು ಹೆಂಡತಿಯರು ಮಕ್ಕಳು ಮೊಮ್ಮಕ್ಕಳಿದ್ದಾರೆ. ನನ್ನ ಹೆಸರಿನಲ್ಲಿ ಕರಿಗಳ ಸರ್ವೆನಂ ೧೮೫/೩ರಲ್ಲಿ ೩ಎಕರೆ ಜಮೀನಿದ್ದು ಇಂದಿಗೂ ಅನುಭದಲ್ಲಿ ನಾನೇ ಇದ್ದೇನೆ.

ನನಗೆ ೮೩ ವರ್ಷ ವಯಸ್ಸಾಗಿದೆ, ಬಿಪಿ ಷುಗರ್ ಕಾಯಿಲೆಯಿಂದ ಬಳಲುತ್ತಿರುವ ನನ್ನ ಅನಾರೋಗ್ಯವನ್ನೇ ಬಂಢವಾಳ ಮಾಡಿಕೊಂಡ ಹಂಪಾಪುರ ನಾಡಕಚೇರಿಯ ಗ್ರಾಮಲೆಕ್ಕಿಗ (ವಿ.ಎ) ಮಹದೇವಸ್ವಾಮಿ ಮತ್ತಿತರ ಅಧಿಕಾರಿಗಳು ಬದುಕಿರುವ ನಾನು ೧೯೮೮ನೇ ಸಾಲಿನಲ್ಲಿ ಮೃತಪಟ್ಟಿರುವುದಾಗಿ ಮರಣ ದೃಢೀಕರಣ ಪತ್ರ ಸೃಷ್ಟಿಸಿ ನನಗೆ ಸಂಬoಧವೇ ಇಲ್ಲದ ಕೆಂಪಾಲಮ್ಮ ಮತ್ತು ನಾಗಮ್ಮ ಇಬ್ಬರೂ ಲೇಟ್ ಮೋರಿನಿಂಗಯ್ಯನವರ ಮಕ್ಕಳೆಂದು ಅವರ ಹೆಸರಿಗೆ ಅಕ್ರಮವಾಗಿ ೩ಎಕರೆ ಜಮೀನಿನ್ನ ತಲಾ ಒಂದುವರೆ ಎಕರೆಯಂತೆ ೨೦೨೩ರಲ್ಲಿ ಜಂಟಿ ಪೌತಿ ಖಾತೆ ಮಾಡಿದ್ದಾರೆ.

ಕಳೆದ ೩ತಿಂಗಳ ಹಿಂದೆ ಅನಿರೀಕ್ಷಿತವಾಗಿ ಬೇರೆಯವರಿಗೆ ಅಕ್ರಮವಾಗಿ ಖಾತೆ ಮಾಡಿರುವ ವಿಚಾರ ತಿಳಿದು ಗ್ರಾಮಲೆಕ್ಕಿಗ ಮಹದೇವಸ್ವಾಮಿಯವರನ್ನು ವಿಚಾರಿಸಿದಾಗ ಆರಂಭದಲ್ಲಿ ಸಬೂಬು ಹೇಳಿದರಾದರೂ ನನ್ನಿಂದ ತಪ್ಪಾಗಿದೆ ಒಂದುವರೆ ತಿಂಗಳಲ್ಲಿ ಮೂಲ ಖಾತೆಯಂತೆ ಯಥಾಸ್ಥಿತಿ ಕಾಪಾಡಿ ಆರ್.ಟಿ.ಸಿ ತಿದ್ದುಪಡಿ ಮಾಡುವ ಭರವಸೆ ನೀಡಿದರು.

ಭರವಸೆ ನೀಡಿ ಇಲ್ಲಿಗೆ ಮೂರುವರೆ ತಿಂಗಳುಗಳು ಕಳೆದರೂ ನನ್ನ ಜಮೀನು ನನಗೆ ಖಾತೆ ಮಾಡಿಕೊಟ್ಟಿಲ್ಲ. ಅವಿದ್ಯಾವಂತ ರೈತನಾದ ನನಗೆ ಈ ರೀತಿ ಮೋಸ ಮಾಡಿರುವ ಅಧಿಕಾರಿಗಳು ಮತ್ತು ಅಕ್ರಮವಾಗಿ ಖಾತೆ ಮಾಡಿಸಿಕೊಂಡವರು ಹಾಗೂ ನಾನು ಬದುಕಿದ್ದೂ ನನ್ನನ್ನು ದಾಖಲೆಯಲ್ಲಿ ಸಾಯಿಸಿರುವ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ನನ್ನ ಜಮೀನಿನ ಖಾತೆ ನನ್ನ ಹೆಸರಿಗೆ ವರ್ಗಾವಣೆ ಮಾಡಿಸಿಕೊಡುವಂತೆ ಅವರು ಅವಲತ್ತಿಕೊಂಡರು.

ಘಟನೆ ಕುರಿತು ದಾಖಲಾತಿಗಳ ಸಮೇತ ಜಿಲ್ಲಾಧಿಕಾರಿಗಳು, ಲೋಕಾಯುಕ್ತರು, ಉಪವಿಭಾಗಾಧಾಕಾರಿಗಳು ಹಾಗೂ ತಹಸೀಲ್ದಾರ್‌ಗೆ ಅಂಚೆ ಮೂಲಕ ದೂರು ನೀಡಲಾಗಿದೆ. ತಾಲೂಕಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಮಾಯಕ ಜನರ ಆಸ್ತಿ ಕಬಳಿಸುವ ಕೆಲಸ ಅಧಿಕಾರಿಗಳಿಂದ ನಿರಂತರವಾಗಿ ಕಂಡು ಕೇಳಿ ಬರುತ್ತಿದ್ದು, ಈ ಪ್ರಕರಣದಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಮುಂದೆ ಅಧಿಕಾರಿಗಳು ಇಂತಹ ಕೆಲಸ ಮಾಡದಂತೆ ಶಿಸ್ತಿನ ಕ್ರಮ ಕೈಗೊಳ್ಳಲಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಎಚ್.ಬಿ.ಬಸವರಾಜು ಉಪಸ್ಥಿತರಿದ್ದರು.




RELATED ARTICLES
- Advertisment -
Google search engine

Most Popular