ಮಂಗಳೂರು (ದಕ್ಷಿಣ ಕನ್ನಡ): ನಕಲಿ ಆಧಾರ್ ಕಾರ್ಡ್ ಗಳನ್ನು ಬಳಸಿ ಪೊರ್ಜರಿ ದಾಖಲಾತಿಗಳನ್ನು ಸೃಷ್ಟಿ ಮಾಡಿದ್ದ 63 ವರ್ಷ ಪ್ರಾಯದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಉಡುಪಿ ಮೂಲದ ಉಮ್ಮರಬ್ಬ ಮೊಯ್ದೀನ್ ಎಂದು ಗುರುತಿಸಲಾಗಿದೆ.
ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾದ ಕ್ರಮಾಂಕ: 141/2023 ಕಲಂ 464, 465, 466, 468, 471, 474 ಐಪಿಸಿ. ಪ್ರಕರಣದಲ್ಲಿ ಆರೋಪಿಯಾದ ಕೆ. ಉಮ್ಮರಬ್ಬ ಮೊಯ್ದೀನ್ ಎಂಬಾತನು ನಕಲಿ ಆಧಾರ್ ಕಾರ್ಡ್ ಗಳನ್ನು ಬಳಸಿ ಪೊರ್ಜರಿ ದಾಖಲಾತಿಗಳನ್ನು ಸೃಷ್ಟಿಸಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಆರೋಪಿಗಳಿಗೆ ಶ್ಯೂರಿಟಿದಾರನಾಗಿ ನಿಂತು ವಂಚನೆ ಮಾಡುತ್ತಿದ್ದವನನ್ನು ಇಂದು ದಸ್ತಗಿರಿ ಮಾಡಲಾಗಿದೆ. ಅಲ್ಲದೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.