ಹೊಸೂರು : ನಿಜವಾದ ಪತ್ರಕರ್ತನಿಗೆ ವಿಶ್ವಾಸಾರ್ಹತೆ, ನೇರ,ದಿಟ್ಟತನ ಮುಖ್ಯ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್ ಕುಮಾರ್ ತಿಳಿಸಿದರು. ಅವರು ಕೆ.ಆರ್.ನಗರ ತಾಲೂಕು ಪತ್ರಕರ್ತರ ಸಂಘಕ್ಕೆ ಅಧ್ಯಕ್ಷರಾಗಿ ವಿನಯ್ ದೊಡ್ಡಕೊಪ್ಪಲು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಭೇರ್ಯ ಮಹೇಶ್ ಆಯ್ಕೆಯಾದ ಹಿನ್ನೆಲೆಯಲ್ಲಿ ಇಬ್ಬರನ್ನು ತಾಲೂಕು ಸರ್ಕಾರಿ ನೌಕರರ ಸಂಘದಿಂದ ಅಭಿನಂದಿಸಿ, ಶುಭಾಶಯ ಕೋರಿ ಮಾತನಾಡಿದರು.
ಪತ್ರಕರ್ತ ತನ್ನ ಬರವಣಿಗೆಯನ್ನು ಪತ್ರಿಕೆಯಲ್ಲಿ ಬಿಂಬಿಸುವ ಮೂಲಕ, ಜನರೊಂದಿಗಿನ ಒಡನಾಟದ ವಿಶ್ವಾಸಾರ್ಹತೆ ಸಂಪಾದಿಸಿಕೊಳ್ಳಬೇಕು.
ಪತ್ರಕರ್ತರು ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿರಬೇಕು. ಆ ಸಂಬಂದ ಸುದ್ದಿಯ ಸಂಬಂಧ ವಾಗಿರಬೇಕು, ಆ ಸುದ್ದಿ ಜೊತೆ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಮ್ಮ ಭವಿಷ್ಯದ ಬಗ್ಗೆ ಚಿಂತಿಸದೆ ಸಮಾಜದಲ್ಲಿನ ಸರಿ ತಪ್ಪುಗಳನ್ನು ತಿದ್ದಿ, ಸರಿದಾರಿಗೆ ತರುವ ಕಾರ್ಯ ಮಾಡುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯವಾದದ್ದು ಎಂದ ಅವರು ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಂತೆ ಸಮಾಜದಲ್ಲಿ ಜನತೆಗೆ ಸತ್ಯದ ಅರಿವು ಮೂಡಿಸುವ ಮಾಧ್ಯಮ ಕ್ಷೇತ್ರವೂ ಒಂದು ಪ್ರಮುಖ ಅಂಗವಾಗಿದೆ. ಸದಾ ಸಮಾಜದ ಶ್ರೇಯೋಭಿವೃದ್ಧಿಗೆ ಚಿಂತಿಸುವ ಮಾಧ್ಯಮದವರ ಪಾತ್ರ ಸಮಾಜದಲ್ಲಿ ಅನನ್ಯವಾದದ್ದು ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ವಿ.ರಮೇಶ್, ಖಜಾಂಚಿ ಡಿವಿ ಗುಡಿ ಪ್ರಸನ್ನ, ನಿರ್ದೇಶಕ ಕೆ.ಪಿ.ಆನಂದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರೇಗೌಡ, ಶಿಕ್ಷಕ ದೇವೇಂದ್ರಣ್ಣ, ಮೈಸೂರು ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಪಿ.ನಂದೀಶ್ ಕುಮಾರ್ ಇದ್ದರು.
ಯಧು ಗಿರೀಶ್ ಅಭಿನಂದನೆ : ಕೆ.ಆರ್.ನಗರ ತಾಲೂಕು ಪತ್ರಕರ್ತರ ಸಂಘದ ನೂತನ ಅಡಳಿತ ಮಂಡಳಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಕೆಲಸ ಮಾಡುವಂತೆ ಹುಣಸೂರು ತಾಲೂಕು ಶ್ರೇಣಿ-2 ತಹಸೀಲ್ದಾರ್ ಎಂ.ಎಸ್‌ಯಧು ಗಿರೀಶ್ ಸಲಹೆ ನೀಡಿ ಅಭಿನಂದಿಸಿದ್ದಾರೆ