Monday, February 23, 2026
Google search engine

Homeಕ್ರೀಡೆಸಮಾಜ ಸೇವಕಿ ಅನುಪಮಾ ಅವರಿಂದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಸಮಾಜ ಸೇವಕಿ ಅನುಪಮಾ ಅವರಿಂದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಪಿರಿಯಾಪಟ್ಟಣ: ತಾಲೂಕಿನ ಯುವ ಸಮೂಹಕ್ಕೆ ಬೆಳೆಯಲು ಸಾಕಷ್ಟು ಅವಕಾಶಗಳಿದ್ದು, ಅವರಿಗೆ ಪ್ರಮುಖವಾಗಿ ಸಹಕಾರ ಜೊತೆಗೆ ಸೂಕ್ತ ಬೆಂಬಲ ಪ್ರಮುಖವಾಗಿದೆ ಎಂದು ಸಮಾಜ ಸೇವಕಿ ಅನುಪಮಾ ಎಲ್ ಅಭಿಪ್ರಾಯಪಟ್ಟರು.

ಪಿರಿಯಾಪಟ್ಟಣ ತಾಲೂಕಿನ ನಂದಿನಾಥಪುರ ಗ್ರಾಮದಲ್ಲಿ ಎನ್.ಸಿ.ಸಿ ಕ್ರಿಕೆಟ್ ರ್ಸ್ ವತಿಯಿಂದ ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಈ ಗ್ರಾಮದ ಯುವಕರು ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡುವ ಮೂಲಕ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿತ್ತಿದ್ದಾರೆ. ನನ್ನನ್ನು ಪ್ರೀತಿಯಿಂದ ಅಹ್ವಾನಿಸಿದರು, ಅವರ ಆಶಾಯದಂತೆ ನಾನು ಚಾಲನೆ ನೀಡಿ ಶುಭಹಾರೈಸಿದ್ದೇನೆ. ಯುವ ಸಮೂಹ ಬೆಳೆಯಬೇಕು ಎಂಬುದು ನನ್ನ ಆಶಯವಾಗಿದೆ. ಯುವಕರು ಯಾವುದೇ ಕ್ರೀಡೆ ಅಥವಾ ಏನೇ ಇದ್ದರೂ ನನ್ನ ಗಮನಕ್ಕೆ ತನ್ನಿ ಸದಾ ಕಾಲ ನಾನು ನಿಮ್ಮ ಜತೆ ಇರುತ್ತೇನೆ ಎಂದರು.

ಡಿಲೆಕ್ಸ್ ಮಂಜು ಮಾತನಾಡಿ, ಸಾಮಾಜಿಕ ಹಿತದೃಷ್ಠಿ, ಸದಾ ಒಳಿತು ಮಾಡುವ ಮನಸ್ಸುವುಳ್ಳ ಮಹಿಳೆ ಆಗಮಿಸಿ ಕ್ರಿಕೆಟ್ ನಮ್ಮ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿರುವುದು ತಾಲೂಕಿನಲ್ಲೇ ಇದೆ ಪ್ರಥಮವಾಗಿದೆ. ಸದಾ ಜನರ ಕಷ್ಟಸುಖಗಳಿಗೆ ಸ್ಪಂದಿಸಿ ಅವರ ಕಣ್ಣೀರು ಒರೆಸುತ್ತಿರುವ ಸಮಾಜ ಸೇವಕಿ ಅನುಪಮಾ ಅವರ ಸೇವೆ ಸದಾ ಕಾಲ ಹೀಗೆ ಮುಂದುವರೆಯಲಿ. ಅವರ ಸಹಕಾರದಂತೆ ನಮ್ಮ ಬೆಂಬಲವು ಕೂಡ ಅವರ ಜತೆ ಇರಲಿದೆ ಎಂದು ಹೇಳಿದರು.

ಎನ್.ಸಿ.ಸಿ ಕ್ರಿಕೆಟ್ ಪಂದ್ಯಾವಳಿ ಮುಖ್ಯಸ್ಥ ದರ್ಶನ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿರುವ ಮತ್ತು ಕಾರ್ಯಕ್ರಮ ಆಗಮಿಸಬೇಕಾಗಿ ಅನುಪಮಾ ಅವರನ್ನು ಕೋರಿದ್ದಾಗ, ಅವರು ಒಂದೇ ಮಾತಿನಲ್ಲಿ ಒಪ್ಪಿ ನಮಗೆ ಸಹಕಾರ ನೀಡುವ ಮೂಲಕ ಟೂರ್ನಿಗೆ ಚಾಲನೆ ಕೊಟ್ಟಿದ್ದಾರೆ. ಇದೊಂದು ವಿಶೇಷ ದಿನವಾಗದೆ. ಅವರ ಜನಪರ, ಯುವ ಸಮೂಹ ಪರವಾದ ಸೇವೆ ಹರಿಯುವ ನದಿಯಂತೆ ಕೆಲಸ ಮಾಡಲಿ ಎಂದರು.

ವೇದಿಕೆ ಸಭೆಯಲ್ಲಿ ಸಮಾಜ ಸೇವಕಿ ಅನುಪಮಾ ಎಲ್ ಅವರನ್ನು ಸನ್ಮಾನಿಸಲಾಯಿತು. ಆಕರ್ಷ್, ದರ್ಶನ್, ಪ್ರಶಾಂತ್, ಶಿವು ಪ್ರದೀಪ್, ಮಂಜುನಾಥ್, ಆಕಾಶ್ ಸೇರಿದಂತೆ ಆಯೋಜಕರು ಹಾಗೂ ಗ್ರಾಮಸ್ಥರು ಇದ್ದರು.

RELATED ARTICLES
- Advertisment -
Google search engine

Most Popular