Friday, April 4, 2025
Google search engine

Homeಕ್ರೀಡೆಕ್ರಿಕೆಟಿಗ ಮೊಹಮ್ಮದ್ ಶಮಿ, ಪ್ಯಾರಾ ಆರ್ಚರಿ ತಾರೆ ಶೀತಲ್ ದೇವಿ ಸೇರಿ 26 ಕ್ರೀಡಾಪಟುಗಳಿಗೆ ರಾಷ್ಟ್ರಪತಿಗಳಿಂದ...

ಕ್ರಿಕೆಟಿಗ ಮೊಹಮ್ಮದ್ ಶಮಿ, ಪ್ಯಾರಾ ಆರ್ಚರಿ ತಾರೆ ಶೀತಲ್ ದೇವಿ ಸೇರಿ 26 ಕ್ರೀಡಾಪಟುಗಳಿಗೆ ರಾಷ್ಟ್ರಪತಿಗಳಿಂದ ಅರ್ಜುನ ಪ್ರಶಸ್ತಿ ಪ್ರದಾನ

ನವದೆಹಲಿ: ಕ್ರಿಕೆಟಿಗ, ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮತ್ತು ಪ್ಯಾರಾ ಆರ್ಚರಿ ತಾರೆ ಶೀತಲ್ ದೇವಿ ಸೇರಿದಂತೆ 26 ಕ್ರೀಡಾಪಟುಗಳಿಗೆ ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

2023 ರ ಏಕದಿನ ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮೊಹಮ್ಮದ್ ಶಮಿ ಅವರು ಈ ಬಾರಿಯ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು.

ಇನ್ನು ಬ್ಯಾಡ್ಮಿಂಟನ್ ತಾರೆಗಳಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ. 2023 ರಲ್ಲಿ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೇರಿಸಿದ್ದ ಈ ಜೋಡಿಗೆ ಖೇಲ್ ರತ್ನ ಪ್ರಶಸ್ತಿ ನೀಡುವ ಮೂಲಕ ರಾಷ್ಟ್ರಪತಿ ದ್ರೌಪದಿ ಮರ್ಮು ಗೌರವಿಸಿದರು.

ಅರ್ಜುನ ಪ್ರಶಸ್ತಿ ಪಡೆದ ಕ್ರೀಡಾಪಟುಗಳು
ಓಜಸ್ ಪ್ರವೀಣ್ ಡಿಯೋಟಾಲೆ (ಆರ್ಚರಿ)
ಅದಿತಿ ಗೋಪಿಚಂದ್ ಸ್ವಾಮಿ (ಆರ್ಚರಿ)
ಶ್ರೀಶಂಕರ್ (ಅಥ್ಲೆಟಿಕ್ಸ್)
ಪಾರುಲ್ ಚೌಧರಿ (ಅಥ್ಲೆಟಿಕ್ಸ್)
ಮೊಹಮ್ಮದ್ ಹುಸಾಮುದ್ದೀನ್ (ಬಾಕ್ಸರ್)
ಆರ್ ವೈಶಾಲಿ (ಚೆಸ್)
ಮೊಹಮ್ಮದ್ ಶಮಿ (ಕ್ರಿಕೆಟ್)
ಅನುಷ್ ಅಗರ್ವಾಲ್ (ಇಕ್ವಿಸ್ಟ್ರಿಯನ್)
ದಿವ್ಯಾಕೃತಿ ಸಿಂಗ್ (ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್)
ದೀಕ್ಷಾ ದಾಗರ್ (ಗಾಲ್ಫ್)
ಕೃಷ್ಣ ಬಹದ್ದೂರ್ ಪಾಠಕ್ (ಹಾಕಿ)
ಸುಶೀಲಾ ಚಾನು (ಹಾಕಿ)
ಪವನ್ ಕುಮಾರ್ (ಕಬಡ್ಡಿ)
ರಿತು ನೇಗಿ (ಕಬಡ್ಡಿ)
ನಸ್ರೀನ್ (ಖೋ-ಖೋ)
ಪಿಂಕಿ (ಲಾನ್ ಬಾಲ್)
ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್)
ಇಶಾ ಸಿಂಗ್ (ಶೂಟಿಂಗ್)
ಹರಿಂದರ್ ಪಾಲ್ ಸಿಂಗ್ (ಸ್ಕ್ವಾಷ್)
ಐಹಿಕಾ ಮುಖರ್ಜಿ (ಟೇಬಲ್ ಟೆನಿಸ್)
ಸುನಿಲ್ ಕುಮಾರ್ (ಕುಸ್ತಿ)
ಆಂಟಿಮ್ ಪಂಘಲ್ (ಕುಸ್ತಿ)
ರೋಶಿಬಿನಾ ದೇವಿ (ವುಶು)
ಶೀತಲ್ ದೇವಿ (ಪ್ಯಾರಾ ಆರ್ಚರಿ)
ಅಜಯ್ ಕುಮಾರ್ (ಅಂಧರ ಕ್ರಿಕೆಟ್)
ಪ್ರಾಚಿ ಯಾದವ್ (ಪ್ಯಾರಾ ಕೆನೋಯಿಂಗ್)

RELATED ARTICLES
- Advertisment -
Google search engine

Most Popular