ಮಂಡ್ಯ: ನೂತನ ವಿಶ್ವವಿದ್ಯಾನಲಯ ವಿದ್ಯಾರ್ಥಿಗಳಿಗೆ ಉಪಯುಕ್ತ ಹಾಗೂ ಪ್ರಸ್ತುತ ಕಾಲಮಾನಕ್ಕೆ ಅಗತ್ಯವಿರುವ ಪಠ್ಯಕ್ರಮವನ್ನು ಆಡಳಿಸಿಕೊಳ್ಳಬೇಕಾಗಿದ್ದು ಅದರಂತೆ ಪಠ್ಯವಸ್ತು ಪರೀಕ್ಷಕರಣೆಗೆ ಮಂಡ್ಯ ವಿಶ್ವವಿದ್ಯಾನಿಲಯ ಮುಂದಾಗಿರುವುದಾಗಿ ಪ್ರಭಾರ ಕುಲಸಚಿವ ಹಾಗೂ ಶಿಕ್ಷಣ ಅಧ್ಯಯನ ಮಂಡಳಿ ಅಧ್ಯಕ್ಷ ಡಾ. ಎಸ್. ಎಲ್. ಸುರೇಶ್ ಹೇಳಿದರು.
ನಗರದ ಸ್ವರ್ಣಸಂದ್ರ ದಲ್ಲಿರುವ ಎ . ಇ.ಟಿ .ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್.ನ ಪ್ರಥಮ ಮತ್ತುತೃತೀಯ ಸೆಮಿಸ್ಟರ್ ಪಠ್ಯ ವಸ್ತು ಪರಿಷ್ಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಂಡ್ಯ ವಿಶ್ವವಿದ್ಯಾಲಯ ಈವರೆಗೆ ಮೈಸೂರು ವಿಶ್ವವಿದ್ಯಾಲಯದ ಪಠ್ಯಕ್ರಮವನ್ನ ಅಳವಡಿಸಿಕೊಂಡಿತ್ತು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ನಮ್ಮ ವಿಶ್ವವಿದ್ಯಾಲಯ ಪ್ರತ್ಯೇಕ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುಲು ಕ್ರಮವಹಿಸಿದ್ದು ಇದಕ್ಕಾಗಿ ವಿಷಯ ತಜ್ಞರ ಸಮಿತಿಯನ್ನು ರಚಿಸಿದ್ದು ಅವರು ಹಲವು ಸುತ್ತಿನ ಕಾರ್ಯಗಾರವನ್ನು ನಡೆಸಿ ಮುಂದಿನ ತಿಂಗಳಲ್ಲಿ ವರದಿ ನೀಡಲಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳ ಹಿತದೃಷ್ಟಿ ಹಾಗು ಸುಗಮವಾದ ಅಧ್ಯಯನ ಹಾಗೂ ಅವರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾದ ಸಹಾಯಕವಾಗುವಂತಹ ಪಠ್ಯ ವಿಷಯ ಇದ್ದಾಗ ಮಾತ್ರ ವಿದ್ಯಾರ್ಥಿಗಳು ಸ್ಪೂರ್ತಿದಾಯಕವಾಗಿ, ಚೈತನ್ಯಶೀಲರಾಗಿ, ಕ್ರಿಯಾಶೀಲರಾಗಿ ,ಚಟುವಟಿಕೆಭರಿತರಾಗಿ ಕಲಿಯಲು ಸಾಧ್ಯ ಎಂದ ಅವರು ಪರೀಕ್ಷಕರಣೆಯ ವೇಳೆ ಈ ಎಲ್ಲಾ ಅಂಶಗಳ ಬಗ್ಗೆ ಗಮನಹರಿಸಬೇಕೆಂದು ಸಲಹೆ ನೀಡಿದ ಅವರು ಇತರೆ ವಿಶ್ವವಿದ್ಯಾನಿಲಯಗಳು ನಮ್ಮ ಪರೀಕ್ಷಕೃತ ಪಠ್ಯ ಪುಸ್ತಕಗಳನ್ನ ಅಳವಡಿಸಿಕೊಳ್ಳಲು ಮುಂದಾಗುವಂತಹ ಪರೀಕ್ಷಕರಣೆ ಆಗಬೇಕೆಂದರು.
ಏ .ಇ.ಟಿ.ಶಿಕ್ಷಣ ಮಹಾವಿದ್ಯಾಲಯ ಅಧ್ಯಕ್ಷರಾದ ಶಾರದ ರಮೇಶ್ ರಾಜು ಕಾರ್ಯಗಾರ ವನ್ನು ಉದ್ಘಾಟಿಸಿ ಮಾತನಾಡಿ ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಪ್ರಾರಂಭ ವಾಗಿರುವುದು ಜಿಲ್ಲೆಯ ರೈತರ ಮಕ್ಕಳ ಉನ್ನತ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಿದೆ ಎಂದ ಅವರು ವಿದ್ಯಾರ್ಥಿಗಳಿಗೆ ನೈತಿಕ ಸಾಮಾಜಿಕ ಕಳಕಳಿ ಹಾಗೂ ದೇಶಪ್ರೇಮ ಬೆಳೆಸುವಂತಹ ಅಧ್ಯಯನ ವಿಷಯಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ದೊರೆಯುವಂತಾಗಬೇಕೆಂದ. ಮಂಡ್ಯ ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸದಸ್ಯ ಹಾಗೂ ಎಇಟಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ. ಶಿವಕುಮಾರ್ ಎಸ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕಾರ್ಯಗಾರದಲ್ಲಿ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ಮಂಡಳಿ ಸದಸ್ಯರಾದ ಡಾ. ಸುವರ್ಣ ವಿ.ಡಿ.,ಡಾ.ಕೆ ಚನ್ನ ಕೃಷ್ಣಯ್ಯ, ಡಾ.ಜಯಶಂಕರ್ ಎಸ್., ಡಾ. ಹೇಮಂತ್ ಕುಮಾರ್ ಬಿ .ಸಿ. ಡಾ. ವಿ .ಕುಮಾರ್, ವಿಷಯ ತಜ್ಞರಾದ ಧರ್ಮೇಶ್ ಹೆಚ್.ಪಿ., ವರುಣ್ . ಡಾ. ಮೇರಿ ಡಿಸೋಜಾ ,ಗಂಗೆಗೌಡ, ಮೋಹನ್ ದಾಸ್, ಸುಕೇಶ್, ಕಿರಣ್ ,ಪ್ರದೀಪ್ ಸೇರಿದಂತೆ ಇತರರು ಹಾಜರಿದ್ದರು.