ಕಸ್ಟರ್ಡ್ ಪೌಡರ್ ಹಲ್ವಾ ಮಾಡುವ ವಿಧಾನ
ಒಂದು ಬೌಲ್ ಗೆ 1 ಕಪ್ ಕಸ್ಟರ್ಡ್ ಪೌಡರ್ ಹಾಕಿ ಅದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಿ. 2 ಕಪ್ ಸಕ್ಕರೆಯನ್ನು ಒಂದು ಪ್ಯಾನ್ ಗೆ ಹಾಕಿ ಅದಕ್ಕೆ 2 ಕಪ್ ನೀರು ಹಾಕಿ ಸಕ್ಕರೆ ಕರಗುವವರಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಸಕ್ಕರೆ ಕರಗಿದ ಮೇಲೆ ಗ್ಯಾಸ್ ಉರಿ ಕಡಿಮೆ ಮಾಡಿಕೊಳ್ಳಿ. ನಂತರ ಇದಕ್ಕೆ ಕಸ್ಟರ್ಡ್ ಮಿಶ್ರಣವನ್ನು ನಿಧಾನಕ್ಕೆ ಹಾಕಿ ಚೆನ್ನಾಗಿ ಕೈಯಾಡಿಸುತ್ತಾ ಇರಿ. ತಳ ಹತ್ತದಂತೆ ಎಚ್ಚರ ವಹಿಸಿ. ಈ ಮಿಶ್ರಣವನ್ನು 15 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ. ಇದು ಸ್ವಲ್ಪ ದಪ್ಪಗಾಗುತ್ತದೆ.
ನಂತರ ಸ್ವಲ್ಪ ಸ್ವಲ್ಪವೇ ತುಪ್ಪ ಹಾಕಿ ಕೈಯಾಡಿಸಿ. ಹೀಗೆ ಸ್ವಲ್ಪ ಸ್ವಲ್ಪ ತುಪ್ಪ ಸೇರಿಸಿ ಕೈಯಾಡಿಸುತ್ತಾ ಹಲ್ವಾ ಹದಕ್ಕೆ ಬರುವವರೆಗೆ ಕೈಯಾಡಿಸುತ್ತಾ ಇರಿ.
ನಂತರ ಇದಕ್ಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದಿಟ್ಟುಕೊಂಡ ದ್ರಾಕ್ಷಿ ಹಾಗೂ ಗೋಡಂಬಿ ಚೂರುಗಳನ್ನು ಹಾಕಿ. ನಂತರ ಒಂದು ಪ್ಲೇಟ್ ಗೆ ತುಪ್ಪ ಸವರಿ ಈ ಹಲ್ವಾ ಮಿಶ್ರಣವನ್ನು ಹಾಕಿ. ನಂತರ ಸ್ವಲ್ಪ ಹೊತ್ತು ಬಿಟ್ಟು ಕತ್ತರಿಸಿದರೆ ರುಚಿಕರವಾದರೆ ಕಸ್ಟರ್ಡ್ ಪೌಡರ್ ಹಲ್ವಾ ಸವಿಯಲು ಸಿದ್ಧವಾಗುತ್ತದೆ.