Friday, April 4, 2025
Google search engine

Homeಕ್ರೀಡೆಮೂರನೇ ಆವೃತ್ತಿಯ ಎಬಿಲಿಟಿ ಸ್ಪೋರ್ಟ್ಸ್ ಲೀಗ್ ಟಿ20ಗೆ ನೆರವು ಒದಗಿಸಿದ ಸೈಕಲ್ ಪ್ಯೂರ್ ಅಗರಬತ್ತಿ

ಮೂರನೇ ಆವೃತ್ತಿಯ ಎಬಿಲಿಟಿ ಸ್ಪೋರ್ಟ್ಸ್ ಲೀಗ್ ಟಿ20ಗೆ ನೆರವು ಒದಗಿಸಿದ ಸೈಕಲ್ ಪ್ಯೂರ್ ಅಗರಬತ್ತಿ

ಮೈಸೂರು,6 ಡಿಸೆಂಬರ್ 2024: ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯು ಡಿಸೆಂಬರ್ 10ರಿಂದ 17ರವರೆಗೆ ಆಲೂರು ಕೆಎಸ್‌ಸಿಎ ಮೈದಾನದಲ್ಲಿ ನಡೆಯಲಿರುವ ಮೂರನೇ ಆವೃತ್ತಿಯ ಎಬಿಲಿಟಿ ಸ್ಪೋರ್ಟ್ಸ್ ಲೀಗ್ಟಿ20ಗೆ (ಹಿಂದೆ ಈ ಪಂದ್ಯಾವಳಿಗೆ ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್ ಎಂಬ ಹೆಸರಿತ್ತು) ಶೀರ್ಷಿಕೆ ಪ್ರಾಯೋಜಕರಾಗಿ ನೆರವನ್ನು ಒದಗಿಸುತ್ತಿದೆ.

ಈ ಟಿ20 ಪಂದ್ಯಾವಳಿಯು ದಕ್ಷಿಣ ಏಷ್ಯಾದ ಮೊದಲ ವೀಲ್‌ ಚೇರ್ ಕ್ರಿಕೆಟ್ ಲೀಗ್ ಆಗಿದ್ದು, ಈ ಪಂದ್ಯಾವಳಿಯಲ್ಲಿ ವೀಲ್‌ಚೇರ್ ಕ್ರೀಡಾಪಟುಗಳು ತಮ್ಮ ಅದ್ಭುತ ಸಾಮರ್ಥ್ಯ ಮತ್ತು ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ಮುಂದೆ ಭಾರತದ ವೀಲ್‌ ಚೇರ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಹೊಂದುವ ಅಪೂರ್ವ ಅವಕಾಶ ಹೊಂದಲಿದ್ದಾರೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಆರು ತಂಡಗಳ 90 ಆಟಗಾರರಿಗೂ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯು ಹೆಲ್ಮೆಟ್, ಗ್ಲೌಸ್, ಪ್ಯಾಡ್, ಬ್ಯಾಟ್ ಒಳಗೊಂಡಂತೆ  ಕ್ರಿಕೆಟ್ ಕಿಟ್‌ ಗಳನ್ನು ಪೂರೈಸಲಿದೆ.

ಈ ಕುರಿತು ಮಾತನಾಡಿರುವ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅರ್ಜುನ್ ರಂಗ ಅವರು, “ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯು ಕ್ರೀಡೆಯು ಎಲ್ಲರನ್ನೂ ಒಗ್ಗೂಡಿಸುವ ಮತ್ತು ಎಲ್ಲರಲ್ಲೂ ಸ್ಫೂರ್ತಿ ತಂಬುವ ಶಕ್ತಿ ಹೊಂದಿದೆ ಎಂಬುದನ್ನು ನಂಬುತ್ತದೆ. ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್ ಗೆ ನೆರವು ಒದಗಿಸುವ ಮೂಲಕ ನಾವು ನಮ್ಮ ಮಧ್ಯೆ ಇರುವ ಅಪೂರ್ವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತಿದ್ದೇವೆ. ಈ ಲೀಗ್ ಗೆ ನೆರವು ನೀಡುವ ವಿಚಾರದಲ್ಲಿ ನಾವು ಹೆಮ್ಮೆ ಹೊಂದಿದ್ದೇವೆ ಎಂದು ಹೇಳಿದರು.

ಸೈಕಲ್ ಪ್ಯೂರ್ ಅಗರಬತ್ತಿಯು ಕ್ರೀಡೆಯ ವಿಚಾರದಲ್ಲಿ ಈಗಾಗಲೇ ಟೈಗರ್ ಕಪ್ ಗೆ ಮಹತ್ವದ ಕೊಡುಗೆ ನೀಡಿದ್ದು, ಮೈಸೂರು ವಾರಿಯರ್ಸ್‌ ತಂಡದ ಮಾಲೀಕತ್ವವನ್ನು ಹೊಂದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ವಿಶೇಷವಾಗಿ ಮೈಸೂರು ವಾರಿಯರ್ಸ್ ತಂಡವು 2024ರ ಮಹಾರಾಜ ಟ್ರೋಫಿಯನ್ನು ಗೆದ್ದುಕೊಂಡಿದೆ.

RELATED ARTICLES
- Advertisment -
Google search engine

Most Popular