ಬೆಂಗಳೂರು: ನಗರದ ಚೊಕ್ಕಸಂದ್ರದಲ್ಲಿ ಅನಿಲ ಸೋರಿಕೆಯಿಂದಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ನಡೆದಿದೆ. ಬಾಡಿಗೆಗೆಂದು ವಾಸವಿದ್ದ ಗಾಯಾಳುಗಳಾದ ದಿಜುಧಾರ್ ಮತ್ತು ಅವರ ಪತ್ನಿ ಅಂಜಲಿ ದಾಸ್ ಅವರ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ನೆರೆಹೊರೆಯವರೂ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ದಿಜುಧಾರ್ (೩೪), ಅಂಜಲಿ ದಾಸ್ (೩೧), ಮನುಶ್ರೀ (೩), ಮನು (೨೫), ತಿಪ್ಪೇರುದ್ರಸ್ವಾಮಿ (೫೦), ಶೋಭಾ (೬೦) ಹಾಗೂ ಕರೀಬುಲ್ಲ ಎಂಬುವವರಿಗೆ ಗಂಭೀರ ಗಾಯಗಾಳಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ತಂಡ ಆಗಮಿಸಿ ಸಂಭವನೀಯ ಹೆಚ್ಚಿನ ಅಪಾಯವನ್ನು ತಪ್ಪಿಸಿದೆ.