Sunday, April 20, 2025
Google search engine

Homeಅಪರಾಧಸಿಲಿಂಡರ್ ಸ್ಫೋಟ ಕುರಿಗಳು ಸಜೀವ ದಹನ, ಮನೆ, ಹಣ ಭಸ್ಮ!

ಸಿಲಿಂಡರ್ ಸ್ಫೋಟ ಕುರಿಗಳು ಸಜೀವ ದಹನ, ಮನೆ, ಹಣ ಭಸ್ಮ!

ಬೆಳಗಾವಿ: ತಾಲೂಕಿನ ಬಸವನಕುಡಚಿ ಗ್ರಾಮದಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟಕ್ಕೆ ನಾಲ್ಕು ಕುರಿಗಳು ಸಾವನ್ನಪ್ಪಿದ್ದು, ಮನೆ ಸುಟ್ಟು ಕರಕಲಾಗಿದೆ. ಬಲಿಪಾಢ್ಯಮಿಯಂದು ಟ್ರ್ಯಾಕ್ಟರ್ ಖರೀದಿಸಲು ನಿರ್ಧರಿಸಿ ಬ್ಯಾಂಕ್‌ನಿಂದ ಹಣ ತೆಗೆದು ಮನೆಯಲ್ಲಿಡಲಾಗಿತ್ತು. ಈ ಹಣ ಕೂಡ ಬೆಂಕಿಗೆ ಆಹುತಿಯಾಗಿದೆ.

ಅಭಿಷೇಕ್ ಕೌಲಗಿ ಎಂಬುವವರಿಗೆ ಸೇರಿದ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಸ್ಫೋಟದ ವೇಳೆ ಮನೆ ಮಂದಿ ಯಾರೂ ಇಲ್ಲದ ಪರಿಣಾಮ ಮಾನವ ಜೀವಹಾನಿ ಸಂಭವಿಸಿಲ್ಲ. ಆದರೆ, ನಾಲ್ಕು ಕುರಿಗಳು ಸಜೀವ ದಹನಗೊಂಡಿದ್ದು, ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಅಭಿಷೇಕ್ ಕುಟುಂಬ ಕಂಗಾಲಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕದ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular