ಎಚ್ ಡಿ ಕೋಟೆ : ಡಿ.ಬಿ.ಕುಪ್ಪೆ ಗ್ರಾಮದಲ್ಲಿ ,ಪಂಚಾಯತಿ ವತಿಯಿಂದ ಪಿಂಚಣಿ ಅದಾಲತ್, ಮತ್ತು ಆರೋಗ್ಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಕಾರ್ಯ ಕ್ರಮದಲ್ಲಿ ಪಂಚಾಯತಿ ಅಧ್ಯಕ್ಷರಾದ ಸುಬ್ರಮಣ್ಯ , ಹುಣಸೂರು ಉಪ ವಿಭಾಗಾಧಿಕಾರಿ ಶ್ರೀಮತಿ ರುಚಿ ಬಿಂದಾಲ್ ರವರು ಅಧ್ಯಕ್ಷತೆಯನ್ನು ವಹಿಸಿ, ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಗ್ರಾಮ ಮತ್ತು ಹಾಡಿ ಜನರು ಭಾಗವಹಿಸಿದ್ದರು. ನಂತರ ಉಪ ವಿಭಾಗಾಧಿಕಾರಿಗಳು ಮಾತನಾಡಿ ಇನ್ನೂ 7ದಿನಗಳ ಕಾಲ ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ ಆಧಾರ್ ಕಾರ್ಡ್,ರೇಷನ್ ಕಾರ್ಡ್,ಮತ್ತು ಆಭಾ ಕಾರ್ಡ್ಗಳನ್ನು ಮಾಡುತ್ತಾರೆ. ಆದುದರಿಂದ ಈ ಭಾಗದ ಎಲ್ಲಾ ಹಾಡಿಯ ಜನರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಣ್ಣ ರಾಮಪ್ಪ,ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಟಿ.ರವಿಕುಮಾರ್, ಉಪ ತಹಶೀಲ್ದಾರ್ ಮಹೇಶ್ ,ಟ್ರೈಬಲ್ ಅಧಿಕಾರಿ ನಾರಾಯಣ ಸ್ವಾಮಿ ,ಪಿಡಿಒ ದೇವರಾಜು,ಗ್ರಾಮ ಪಂಚಾಯತಿ ಸದ್ಯಸರಾದ ವೆಂಕಟೇ ಗೌಡ , KHPT ರಾಘವೇಂದ್ರ , ಪಂಚಾಯಿತಿ ಸದಸ್ಯರು,ಆರೋಗ್ಯ ಇಲಾಖೆ ಸಿಬ್ಬಂದಿವರ್ಗದವರು, ಕಂದಾಯ ಇಲಾಖೆ ಸಿಬ್ಬಂದಿ ವರ್ಗದವರು,ಗ್ರಾಮದ ಮುಖಂಡರು,ಆದಿವಾಸಿ ಮುಖಂಡರುಗಳು, ಮತ್ತು ಜನರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು,ಗ್ರಾಮಸ್ಥರು ,ಇನ್ನಿತರರು ಹಾಜರಿದ್ದರು.
