ವರದಿ: ಸತೀಶ್ ಆರಾಧ್ಯ, ಪಿರಿಯಾಪಟ್ಟಣ
ಪಿರಿಯಾಪಟ್ಟಣ: ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆ ವತಿಯಿಂದ ಡಿ.ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮ ಆಚರಿಸಲಾಯಿತು.

ಡಿ.ದೇವರಾಜ ಅರಸು ಅವರ ಹುಟ್ಟುರಾದ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗ ಗ್ರಾಮಕ್ಕೆ ಭೇಟಿ ನೀಡಿ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ರೋಟರಿ ಐಕಾನ್ಸ್ ಅಧ್ಯಕ್ಷ ಜೆ.ಎಸ್ ನಾಗರಾಜ್ ಅವರು ಮಾತನಾಡಿ ಡಿ.ದೇವರಾಜ ಅರಸು ಅವರು ಕನ್ನಡ ನಾಡು ಕಂಡ ಧೀಮಂತ ರಾಜಕೀಯ ಮುತ್ಸದ್ದಿಯಾಗಿದ್ದರು, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಾಮಾಜಿಕ ಪರಿಕಲ್ಪನೆಯಿಂದ ರಾಜ್ಯದಲ್ಲಿ ಅಧಿಕಾರ ನಡೆಸಿದ ಮುಖ್ಯಮಂತ್ರಿಗಳಲ್ಲಿ ಡಿ.ದೇವರಾಜ ಅರಸು ಅವರು ಮೊದಲಿಗರು, ಅವರ ಅಧಿಕಾರ ಅವಧಿಯಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಬದಲಾವಣೆ ತಂದು ಎಲ್ಲರೂ ಸಮಾನರಾಗಿ ಬಾಳು ನಡೆಸಲು ಅವಕಾಶ ಮಾಡಿಕೊಟ್ಟಿದ್ದ ಇವರ ನಿಸ್ವಾರ್ಥ ಸೇವೆ ರಾಜ್ಯಕ್ಕೆ ಅಲ್ಲದೆ ರಾಷ್ಟ್ರ ರಾಜಕಾರಣಕ್ಕೆ ಮಾದರಿಯಾಗಿತ್ತು ಇಂತಹ ಮಹಾನ್ ವ್ಯಕ್ತಿ ನಮ್ಮ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗ ಗ್ರಾಮದಲ್ಲಿ ಜನಿಸಿದರು ಎಂಬುದೇ ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ ಎಂದರು.
ಈ ವೇಳೆ ಬೆಟ್ಟದತುಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಡಿ.ದೇವರಾಜ ಅರಸು ಅವರ ಆದರ್ಶ ಜೀವನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಬಳಿಕ ಸಿಹಿ ವಿತರಿಸಲಾಯಿತು.

ಈ ಸಂದರ್ಭ ಬೆಟ್ಟದತುಂಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗು ರೋಟರಿ ಐಕಾನ್ಸ್ ಸದಸ್ಯೆ ಪ್ರೀತಿ ಅರಸ್, ರೋಟರಿ ಐಕಾನ್ಸ್ ಕಾರ್ಯದರ್ಶಿ ಬಿ.ಎಸ್ ಪ್ರಸನ್ನ ಕುಮಾರ್, ಸದಸ್ಯರಾದ ಬಿ.ಎಸ್ ಸತೀಶ್ ಆರಾಧ್ಯ, ಡಿ.ಆರ್ ಧನಂಜಯ್, ವೆಂಕಟೇಶ್, ಪಿಡಿಓ ಚೇತನ್, ಕಾರ್ಯದರ್ಶಿ ಚಂದ್ರಹಾಸ್ ಸಿಬ್ಬಂದಿ ಅಣ್ಣಯ್ಯ, ಸುಮತಿ, ಪ್ರಭುರಾಜ್, ಮುಖಂಡರಾದ ಹರೀಶ್ ರಾಜೇಅರಸ್, ಶಂಕರೇಗೌಡ, ರಾಜೇ ಅರಸ್, ಶಾಲೆಯ ಮುಖ್ಯ ಶಿಕ್ಷಕ ವೈ.ಕೆ ಸಿಂಗ್ರಿ, ಶಿಕ್ಷಕರಾದ ಮೌನಶ್ರೀ, ಅಭಿಷೇಕ್, ಸತೀಶ್, ರಮ್ಯಾ ಇದ್ದರು.