Friday, February 6, 2026
Google search engine

Homeಸ್ಥಳೀಯಹರಿಹರದ ವಾಲ್ಮೀಕಿ ಜಾತ್ರೆಗೆ ಡಿ.ರವಿಶಂಕರ್ ವಾಹನ ವ್ಯವಸ್ಥೆ: ನಾಯಕರ ಪ್ರಶಂಸೆ

ಹರಿಹರದ ವಾಲ್ಮೀಕಿ ಜಾತ್ರೆಗೆ ಡಿ.ರವಿಶಂಕರ್ ವಾಹನ ವ್ಯವಸ್ಥೆ: ನಾಯಕರ ಪ್ರಶಂಸೆ

ವರದಿ : ಕುಪ್ಪೆ ಮಹದೇವಸ್ವಾಮಿ

ಕೆ.ಆರ್.ನಗರ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಜ, 8 ಮತ್ತು 9 ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿಗೆ ಸಾಲಿಗ್ರಾಮ ಹಾಗೂ ಕೆ.ಆರ್.ನಗರ ತಾಲೂಕಿನ ಸಮಸ್ತ ನಾಯಕ ಸಮಾಜದ ಬಂದುಗಳು ಆಗಮಿಸಬೇಕು ಎಂದು ತಾಲೂಕು ನಾಯಕರ ಸಂಘದ ಅಧ್ಯಕ್ಷ ಹಂಪಾಪುರ ಸುಬ್ಬುಕೃಷ್ಣ ಆಹ್ವಾನ ನೀಡಿದರು.

ಕ್ಷೇತ್ರದ ಶಾಸಕರಾದ ಡಿ.ರವಿಶಂಕರ್ ಮತ್ತು ಎರಡು ತಾಲೂಕುಗಳ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಸಮಾಜದ ಬಾಂದವರಿಗೆ ವಾಲ್ಮೀಕಿ ಜಾತ್ರೆಯ ಆಹ್ವಾನ ಪತ್ರಿಕೆ ವಿತರಿಸಿದ ನಂತರ ಪಟ್ಟಣದ ನಾಯಕ ಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಎರಡು ದಿನಗಳ ಕಾಲ ವಾಲ್ಮೀಕಿ ಜಾತ್ರೆಯ ಜತೆಗೆ ಪುಣ್ಯಾನಂದಪುರಿ ಶ್ರೀಗಳ 19 ನೇ ವರ್ಷದ ಪುಣ್ಯಾರಾಧನೆ ಮತ್ತು ಡಾ.ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳ 18 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಸಹ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜಾತ್ರೆಗೆ ತೆರಳಲು ಶಾಸಕರಾದ ಡಿ.ರವಿಶಂಕರ್ ಅವರು ವಾಹನದ ಅನುಕೂಲ ಕಲ್ಪಿಸಿದ್ದು ಇದರೊಂದಿಗೆ ಈ ಹಿಂದೆ ಚುನಾಯಿತರಾದವರು ಅಗತ್ಯ ಸಹಕಾರ ನೀಡಿದ್ದಾರೆಂದು ಅಧ್ಯಕ್ಷರು ತಿಳಿಸಿದರು. ಸಾಲಿಗ್ರಾಮ ತಾಲೂಕು ಅಧ್ಯಕ್ಷ ಸಿ.ಸಿ.ಮಹದೇವ್ ಮಾತನಾಡಿ ವಾಲ್ಮೀಕಿ ಜಾತ್ರೆಗೆ ಆಗಮಿಸುವವರು ಎರಡು ತಾಲೂಕಿನ ಸಮಾಜದ ಬಂದುಗಳು ಸಂಘದ ಪದಾಧಿಕಾರಿಗಳು ಮತ್ತು ಪ್ರಮುಖರ ಜತೆ ಸಂಪರ್ಕ ಸಾಧಿಸಿ ಬರುವವರಿಗೆ ಸಹಕಾರ ನೀಡಬೇಕೆಂದು ಕೋರಿದರು.
ಜಾತ್ರೆಗೆ ಶಾಸಕರಾದ ಡಿ.ರವಿಶಂಕರ್ ಅವರು ಸೇರಿದಂತೆ ಇತರ ರಾಜಕೀಯ ನಾಯಕರು ಹಾಗೂ ಮಾಜಿ ಶಾಸಕರುಗಳು ಜಾತ್ಯಾತೀತವಾಗಿ ಆಗಮಿಸುತ್ತಿದ್ದು ಇದು ಅತ್ಯಂತ ಸಂತಸದ ವಿಚಾರ ಎಂದು ನುಡಿದರು.

ಸಂಘದ ಉಪಾಧ್ಯಕ್ಷ ತಿಪ್ಪೂರುಮಹದೇವನಾಯಕ ಮಾತನಾಡಿ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆಯಲಿರುವ ವಾಲ್ಮೀಕಿ ಜಯಂತಿ ಮತ್ತು ಪುಣ್ಯಾನಂದಪುರಿ ಶ್ರೀಗಳ 19 ನೇ ವರ್ಷದ ಪುಣ್ಯಾರಾಧನೆ ಹಾಗೂ ಡಾ.ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳ 18 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವಕ್ಕೆ ತೆರಳುವ ನಾಯಕ ಸಮಾಜದ ಬಾಂದವರಿಗೆ ವಾಹನದ ವ್ಯವಸ್ಥೆ ಕಲ್ಪಿಸಿರುವ ಶಾಸಕರಾದ ಡಿ.ರವಿಶಂಕರ್ ಅವರಿಗೆ ಕೃತಜ್ಞತೆ ಸಲ್ಲಿಸುದಾಗಿ ತಿಳಿಸಿದರು.

ಸಮಾಜದ ಹಿರಿಯ ಮುಖಂಡ ಹೊಸೂರುಕಲ್ಲಹಳ್ಳಿಶ್ರೀನಿವಾಸ್, ಸಂಘದ ಉಪಾಧ್ಯಕ್ಷರಾದ ಮಹದೇವು, ಕ್ಯಾರೆನಾಗರಾಜು, ಪ್ರಧಾನ ಕಾರ್ಯದರ್ಶಿ ಸಾತಿಗ್ರಾಮಗಣೇಶ್, ಸಂಘಟನಾ ಕಾರ್ಯದರ್ಶಿ ದೇವರಾಜು, ಸಮಾಜದ ಮುಖಂಡರಾದ ಶಿವಪ್ಪನಾಯಕ, ಗಂಗಾಧರ, ಪವನ್ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular