ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾಭಿವೃದ್ದಿ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ.ಎಸ್.ಭರತ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ರೇಣುಕ ಆಯ್ಕೆಯಾಗಿದ್ದಾರೆ.
ಸೋಮವಾರ ಶಾಲೆಯ ಮುಖ್ಯ ಶಿಕ್ಷಕ ಕರ್ತಾಳ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ನೂತನ ಶಾಲಾಭಿವೃದ್ದಿ ಸಮಿತಿಯ ಆಯ್ಕೆಯ ಸಭೆಯಲ್ಲಿ ಇವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.
ಉಳಿದಂತೆ ಸದಸ್ಯರಾಗಿ ಲೋಕೇಶ್, ಪವಿತ್ರ, ಕವಿತಾ, ಗಿರೀಶ್, ಶ್ರೀನಿವಾಸ್, ಕುಮಾರ, ಲೋಕೇಶ್, ನಾಗವೇಣಿ, ಸರಸ್ವತಿ, ಭಾಗಿರಥಿ, ಶ್ವೇತಾ, ಆನಂದ್, ಆಶಾ, ಸವಿತಾ, ರಾಜಮಣಿ.ಸಿ.ಆರ್.ರಮೇಶ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯೆ ರೇಖಾ ಉಮೇಶ್ ಸಮಿತಿಯ ಮಾಜಿ ಅಧ್ಯಕ್ಷರಾದ ಸಿ.ಜಿ.ಜಗನ್ನಾಥ್, ಸಿ.ಡಿ ಜಗದೀಶ್, ಸವಿತಾ ಶಾಲೆಯ ಶಿಕ್ಷಕರಾದ ಡಿ.ಎನ್. ಸವಿತಾ, ಎಂ.ಕೇಶವ್, ಜಿ.ಬಿ.ಸ್ವಾಮಿ, ಕೆ.ಎಚ್.ದೀಪಾ, ಕೌಶಲ್ಯ ಮತ್ತು ಪೋಷಕರು ಹಾಜರಿದ್ದರು.