Tuesday, April 22, 2025
Google search engine

Homeರಾಜ್ಯಸುದ್ದಿಜಾಲಪ್ರತಿನಿತ್ಯ ವ್ಯಾಯಮ,ಆಹಾರ ಕ್ರಮ ಅನುಸರಿಸಿದರೆ ಸಾಕು, ಹೃದಯಾಘಾ ಪ್ರಕರಣಗಳನ್ನು ತಡೆಗಟ್ಟಬಹುದು: ಡಾ.ಎಚ್.ಜಿ.ಗೌತಮ್

ಪ್ರತಿನಿತ್ಯ ವ್ಯಾಯಮ,ಆಹಾರ ಕ್ರಮ ಅನುಸರಿಸಿದರೆ ಸಾಕು, ಹೃದಯಾಘಾ ಪ್ರಕರಣಗಳನ್ನು ತಡೆಗಟ್ಟಬಹುದು: ಡಾ.ಎಚ್.ಜಿ.ಗೌತಮ್

ಹುಣಸೂರು: ಪ್ರತಿನಿತ್ಯ ವ್ಯಾಯಮ ಹಾಗೂ ಆಹಾರ ಕ್ರಮ ಅನುಸರಿಸಿದರೆ ಸಾಕು. ಹೃದಯಾಘಾತದಂತಹ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಅಪೋಲೋ ಆಸ್ಪತ್ರೆಯ ಹೈದ್ದೋಗ ತಜ್ಞ ಡಾ.ಎಚ್.ಜಿ.ಗೌತಮ್ ತಿಳಿಸಿದರು.

ನಗರದ ಅಪೋಲೊ ಆಸ್ಪತ್ರೆಯಲ್ಲಿ ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಸಾಮಾನ್ಯವಾಗಿ ಬಿ.ಪಿ. , ರಕ್ತದೊತ್ತಡ, ಅತಿಯಾದ ಕೊಲೆಸ್ಟ್ರಾಲ್ ಇದ್ದರೂ ಹೃದಯಾಘಾತ ಸಂಭವಿಸುತ್ತದೆ. ಇಂತಹ ವೇಳೆ 15 ರಿಂದ 20 ನಿಮಿಷಗಳವರೆಗೆ ಎದೆನೋವು ಕಾಣಿಸಿಕೊಂಡು ಎದೆ ಹಿಡಿದಂತಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಡೆದಾಡುವುದು, ಮೇಟಿಲುಗಳನ್ನು ಹತ್ತುವುದು, ಮಾಡದೆ ಆಸ್ಪತ್ರೆಗೆ ತೆರಳಿ ತಕ್ಷಣವೇ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಇಸಿಜಿ ಮಾಡಿಸುವುದರಿಂದ ಪ್ರಾಣ ಅಪಾಯದಿಂದ ಪಾರಗಬಹುದು.ನಂತರ ಒಂದು ಗಂಟೆಯೊಳಗೆ ಉತ್ತಮ ಚಿಕಿತ್ಸೆ ಪಡೆಯಬಹುದು ಎಂದು ಸಲಹೆ ನೀಡಿದರು.

ಮೂಳೆ ತಜ್ಞೆ ಡಾ.ಸಿಂಧು ಮಾತನಾಡಿ, 50 ವರ್ಷ ಮೇಲ್ಪಟ್ಟವರಿಗೆ ಹೆಚ್ಚಾಗಿ ಮೂಳೆ ಸವೆತದಿಂದ ಮಂಡಿನೋವು, ಕೀಲುನೋವು, ಕಾಣಿಸಿತ್ತದೆ. ಇಂತಹ ಸಮಸ್ಯೆಗಳನ್ನು ತಡೆಗಟ್ಟಲು ದಿನನಿತ್ಯದ ಜೀವನದಲ್ಲಿ ಸರಳ ವ್ಯಾಯಾಮಗಳು ಹಾಗೂ ಆಹಾರ ಕ್ರಮ ಸೇರಿದಂತೆ ವೈದ್ಯರೆ ಸಲಹೆ ಪಡೆಯುವುದು ಕಡ್ಡಾಯ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಪತ್ರಕರ್ತರು ಪ್ರತಿದಿನ ಹಗಲಿರುಳು ಸಮಾಜಮುಖಿಯಾಗಿ ಸೇವೆ ಮಾಡುತ್ತಿದ್ದು, ಅವರಿಗೂ ಉತ್ತಮ ಆರೋಗ್ಯದ ಅವಶ್ಯಕತೆ ಇದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರಿಗೆ ಹೃದ್ರೋಗ ಸೇರಿದಂತೆ ಸಂಪೂರ್ಣ ದೇಹ ಆರೋಗ್ಯ ಸೇವೆ ಮಾಡುವ ಮೂಲಕ ಅಪೋಲೋ ಆಸ್ಪತ್ರೆ ಪತ್ರಕರ್ತರಿಗೆ ಉತ್ತಮ ಆರೋಗ್ಯವನ್ನು ಒದಗಿಸುವ ಮೂಲಕ ಉತ್ತಮ ಸೇವೆ ನೀಡಲು ಮುಂದಾಗಿರುವುದು ಶ್ಲಾಘನೀಯವೆಂದರು.

ಶಿಬಿರದಲ್ಲಿ ಹಲವು ರಕ್ತ ಪರೀಕ್ಷೆ ಸೇರಿದಂತೆ ಹಲವಾರು ಆರೋಗ್ಯ ತಪಾಸಣೆಯಲ್ಲಿ 25 ಕ್ಕೂ ಹೆಚ್ಚು ಪತ್ರಕರ್ತರು ಪಾಲ್ಗೊಂಡು ಶಿಬಿರದ ಉಪಯೋಗ ಪಡೆದರು. ಇದೆ ಸಂದರ್ಭದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಅಪೋಲೊ ಆಸ್ಪತ್ರೆಯ ವೈದ್ಯರಾದ ಡಾ.ಗೌತಮ್, ಡಾ.ಸಿಂಧು, ಡಾ.ಷಡಕ್ಷರಿ,ಡಾ.ಅಶೋಕ್, ಹಾಗೂ ವ್ಯವಸ್ಥಾಪಕ ಕೇಶವ್ ರವರನ್ನು ಸನ್ಮಾನಿಸಲಾಯಿತು.

ಈ ವೇಳೆ ಡೇ ಕೇರ್ ಸೆಂಟರ್ ನ ವ್ಯವಸ್ಥಾಪಕ ಕೇಶವ್, ಲ್ಯಾಬ್ ಟೆಕ್ನಾಲಜಿಷ್ಟ್ ಮಂಜು, ಹಾಗೂ ಪತ್ರಕರ್ತರಾದ ಹನಗೋಡ್ ನಟರಾಜ್,ದಾರಾ ಮಹೇಶ್, ಚಲುವರಾಜ್ ಮಹದೇವ್,ಶಂಕರ್, ಹೆಚ್.ಕೆ.ಕೃಷ್ಣ, ಕೆ.ಕೃಷ್ಣ ಗಜೇಂದ್ರ, ಮನು ಕುಮಾರ್, ಜಯರಾಂ, ಇದ್ದರು ಮಿತ್ರರು ಇದ್ದರು.

RELATED ARTICLES
- Advertisment -
Google search engine

Most Popular