Saturday, July 26, 2025
Google search engine

Homeಅಪರಾಧದಕ್ಷಿಣ ಕನ್ನಡ: ನಾಪತ್ತೆಯಾಗಿದ್ದ ಆಂಬ್ಯುಲೆನ್ಸ್ ಚಾಲಕನ ಮೃತದೇಹ 4ನೇ ದಿನ ಕುಮಾರಧಾರ ನದಿಯಲ್ಲಿ ಪತ್ತೆ

ದಕ್ಷಿಣ ಕನ್ನಡ: ನಾಪತ್ತೆಯಾಗಿದ್ದ ಆಂಬ್ಯುಲೆನ್ಸ್ ಚಾಲಕನ ಮೃತದೇಹ 4ನೇ ದಿನ ಕುಮಾರಧಾರ ನದಿಯಲ್ಲಿ ಪತ್ತೆ

ಮಂಗಳೂರು (ದಕ್ಷಿಣ ಕನ್ನಡ): ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕನ ಮೃತದೇಹ ಕುಮಾರಧಾರ ನದಿಯಲ್ಲಿ ಇಂದು ಪತ್ತೆಯಾಗಿದೆ. ಕಾಣೆಯಾಗಿದ್ದ ಹೊನ್ನಪ್ಪ (52) ಮೃತರು.

ಹೊನ್ನಪ್ಪ ಅವರು ಮಂಗಳವಾರದಿಂದ ನಾಪತ್ತೆಯಾಗಿದ್ದರು. ಅವರು ಕುಮಾರಧಾರ ನದಿ ಕಡೆಗೆ ಓಡುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು. ಈ ಹಿನ್ನಲೆ ನದಿಗೆ ಹಾರಿರಬಹುದು ಎಂಬ ಶಂಕೆ ಮೇರೆಗೆ ಕುಮಾರಧಾರ ನದಿಯಲ್ಲಿ ಅಂದು ರಾತ್ರಿಯಿಂದಲೇ ಹುಡುಕಾಟ ಆರಂಭಿಸಲಾಗಿತ್ತು.

ಬುಧವಾರದಿಂದ ಎಸ್.ಡಿ.ಆರ್.ಎಫ್. ತಂಡ, ಈಶ್ವರ್ ಮಲ್ಪೆ ತಂಡ, ಆಂಬ್ಯುಲೆನ್ಸ್ ಚಾಲಕರ ತಂಡ, ರವಿ ಕಕ್ಕೆಪದವು ತಂಡ, ಅಗ್ನಿಶಾಮಕದಳ ಸುಳ್ಯ, ಸ್ಥಳೀಯರು ಶೋಧ ಕಾರ್ಯಾಚರಣೆ ನಡೆಸಿದ್ದರು.
ನಿರಂತರ ಕಾರ್ಯಾಚರಣೆ ನಡೆದಿದ್ದು, 4ನೇ ದಿನವಾದ ಶುಕ್ರವಾರ ಕುಮಾರಧಾರ ಸ್ನಾನಘಟ್ಟದಿಂದ ಸುಮಾರು ಕಿ.ಮೀ. ಕೆಳಭಾಗದಲ್ಲಿ ಹೊನ್ನಪ್ಪ ಅವರ ಮೃತದೇಹ ಪತ್ತೆಯಾಗಿದೆ.

RELATED ARTICLES
- Advertisment -
Google search engine

Most Popular