Thursday, April 3, 2025
Google search engine

Homeರಾಜ್ಯಸುದ್ದಿಜಾಲದಕ್ಷಿಣ ಕನ್ನಡ: ಮಳೆ ಹಾವಳಿ,ಕೆಲವೆಡೆ ಮನೆಗಳಿಗೆ ಹಾನಿ

ದಕ್ಷಿಣ ಕನ್ನಡ: ಮಳೆ ಹಾವಳಿ,ಕೆಲವೆಡೆ ಮನೆಗಳಿಗೆ ಹಾನಿ

ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾವಳಿಗೆ ಕೆಲವೆಡೆ ಮನೆಗಳಿಗೆ ಹಾನಿ ಸಂಭವಿಸಿದ ಘಟನೆ ನಡೆದಿದೆ. ಬಂಟ್ವಾಳ ಕಸಬಾ ಗ್ರಾಮದ ಮಣಿಹಳ್ಳ ಎಂಬಲ್ಲಿ ಬಿರುಗಾಳಿ ಹಾಗೂ ಮಳೆಗೆ ಭವಾನಿ ಕೋಂ ವಾಸು ಮೂಲ್ಯ, ಶ್ರೀಮತಿ ಕೋಂ ದಿವಾಕರ ಆಚಾರಿ, ಪೂರ್ಣಿಮಾ ಕೋಂ ಶೇಖರ, ಗುಲಾಬಿ ಕೋಂ ಆನಂದ, ಗುಲಾಬಿ ಕೋಂ ಸುಧಾಕರ, ಲಕ್ಷ್ಮಣ ಬಿನ್ ಅಣ್ಣ ಮೂಲ್ಯ ಅವರುಗಳ ಮನೆಗಳ ಹಂಚು ಮೇಲ್ಛಾವಣಿಗೆ ಬಾಗಶಃ ಹಾನಿ ಸಂಭವಿಸಿದೆ. ಬರಿಮಾರು ನಿವಾಸಿ ಗುರುಪ್ರಸಾದ್ ಬಲ್ಯ ಅವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಬಾಗಶಃ ಹಾನಿಗೊಂಡಿದೆ ಎಂದು ತಾಲೂಕು ಕಚೇರಿ ಮಾಹಿತಿ ತಿಳಿಸಿದೆ.

RELATED ARTICLES
- Advertisment -
Google search engine

Most Popular