Friday, April 18, 2025
Google search engine

Homeಸಿನಿಮಾದಳಪತಿ ವಿಜಯ್‌ ಜನ್ಮದಿನ: ʼಲಿಯೋʼ ಫಸ್ಟ್‌ ಲುಕ್‌ ರಿಲೀಸ್

ದಳಪತಿ ವಿಜಯ್‌ ಜನ್ಮದಿನ: ʼಲಿಯೋʼ ಫಸ್ಟ್‌ ಲುಕ್‌ ರಿಲೀಸ್

ಚೆನ್ನೈ: ದಳಪತಿ ವಿಜಯ್‌ ಅವರಿಗಿಂದು 49ನೇ ಹುಟ್ಟುಹಬ್ಬದ ಸಂಭ್ರಮ. ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿರುವ ಅವರಿಗೆ ಎಲ್ಲೆಡೆಯಿಂದ ಶುಭಾಶಯಗಳು ಹರಿದು ಬರುತ್ತಿದೆ. ಇದರೊಂದಿಗೆ ʼಲಿಯೋʼ ಫಸ್ಟ್‌ ಲುಕ್‌ ರಿಲೀಸ್‌ ಆಗಿರುವುದು ಫ್ಯಾನ್ಸ್‌ ಗಳಿಗೆ ಡಬಲ್ ಖುಷಿ ಸಿಕ್ಕಂತಾಗಿದೆ.

ಲೋಕೇಶ್ ಕನಕರಾಜ್ – ವಿಜಯ್‌ ಕಾಂಬಿನೇಷನ್‌ ನಲ್ಲಿ ಬರುತ್ತಿರುವ ʼಲಿಯೋʼ ಸಿನಿಮಾ ಈಗಾಗಲೇ ದೊಡ್ಡಮಟ್ಟದ ಹೈಪ್‌ ಕ್ರಿಯೇಟ್‌ ಮಾಡಿದೆ. ʼಮಾಸ್ಟರ್‌ʼ ಬಳಿಕ ಮತ್ತೆ ಬಾಕ್ಸ್‌ ಆಫೀಸ್‌ ನಲ್ಲಿ ಮೋಡಿ ಮಾಡಲು ಈ ಜೋಡಿ ತಯಾರಾಗಿದೆ. ಸಿನಿಮಾದ ಟೈಟಲ್‌ ಅನೌನ್ಸ್‌ ಆದ ದಿನದಂದಲೇ ಸಿನಿಮಾದ ಪ್ರತಿಯೊಂದು ಅಪ್ಡೇಟ್‌ ಗೆ ಜನ ಕಾಯುತ್ತಿದ್ದರು. ಇತ್ತೀಚೆಗೆ ಕೆಲ ಸಮಯದ ಹಿಂದೆ ʼಲಿಯೋʼ ಸಿನಿಮಾ ಡಿಜಿಟಲ್ ಹಕ್ಕುಗಳು, ಸ್ಯಾಟಲೈಟ್ ಮತ್ತು ಮ್ಯೂಸಿಕ್ ರೈಟ್ಸ್‌ಗಳು ದೊಡ್ಡಮಟ್ಟದ ಮೊತ್ತಕ್ಕೆ ಸೇಲಾಗಿತ್ತು ಎನ್ನುವುದರ ಕುರಿತು ವರದಿಯೊಂದು ವೈರಲ್‌ ಆಗಿತ್ತು.

ಸಿನಿಮಾದ ಮೊದಲ ಹಾಡು “ನಾ ರೆಡಿ” ಕೂಡ ವಿಜಯ್‌ ಹುಟ್ಟುಹಬ್ಬಕ್ಕೆ (ಜೂ.22 ರಂದು) ರಿಲೀಸ್‌ ಆಗಲಿದ್ದು, ಈ ಹಾಡಿನ ಪ್ರೋಮೋ ಈಗಾಗಲೇ ಬಿಡುಗಡೆಯಾಗಿ ಸೌಂಡ್‌ ಮಾಡುತ್ತಿದೆ.

ವಿಜಯ್‌ ಹುಟ್ಟುಹಬ್ಬಕ್ಕೆ ʼಲಿಯೋʼ ಚಿತ್ರತಂಡ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದೆ. ಕೈಯಲ್ಲಿ ಸುತ್ತಿಗೆಯೊಂದನ್ನು ಹಿಡಿದುಕೊಂಡು ಮಾಸ್‌ ಅವತಾರದಲ್ಲಿ ವಿಜಯ್‌ ಕಾಣಿಸಿಕೊಂಡಿದ್ದಾರೆ. “ಪಳಗಿಸದ ನದಿಗಳ ಜಗತ್ತು, ಶಾಂತವಾದ ನೀರು ದೈವಿಕ ದೇವತೆಗಳಾಗುತ್ತವೆ ಅಥವಾ ಭಯಾನಕ ರಾಕ್ಷಸರಾಗುತ್ತವೆ.” ಎಂದು ಪೋಸ್ಟರ್‌ ನಲ್ಲಿ ಬರೆಯಲಾಗಿದೆ.  ಈ ಪೋಸ್ಟರ್‌ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ.

ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್‌ ಅವರು ಮ್ಯೂಸಿಕ್ ನೀಡಿದ್ದು, ನಟಿ ತ್ರಿಷಾ ಕೃಷ್ಣನ್‌ 14 ವರ್ಷಗಳ ಬಳಿಕ ವಿಜಯ್‌ ಅವರ ಜೊತೆಯಾಗಿ ನಟಿಸಿದ್ದಾರೆ. ಸಂಜಯ್‌ ದತ್‌ ,ಅರ್ಜುನ್, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಗೌತಮ್ ಮೆನನ್, ಪ್ರಿಯಾ ಆನಂದ್, ಮ್ಯಾಥ್ಯೂ ಥಾಮಸ್, ಸ್ಯಾಂಡಿ ಮಾಸ್ಟರ್ ಮುಂತಾದ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.

ಅಂದಹಾಗೆ ಇದೇ ಅಕ್ಟೋಬರ್‌ 19 ರಂದು ಸಿನಿಮಾ ವರ್ಲ್ಡ್‌ ವೈಡ್‌ ತೆರೆಗೆ ಬರಲಿದೆ.

RELATED ARTICLES
- Advertisment -
Google search engine

Most Popular