ಮಂಡ್ಯ: ದರ್ಶನ್ ಗ್ಯಾಂಗ್ ನಿಂದ ಮದ್ದೂರು ಶಾಸಕನ ಮನೆಯಲ್ಲಿ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆದಿತ್ತು ಎನ್ನಲಾಗಿದೆ.
ಶಾಸಕ ಉದಯ್ ಗನ್ ಮ್ಯಾನ್ ಆಗಿದ್ದ ಡಿಎಆರ್ ಪೇದೆ ನಾಗೇಶ್(25) ಪೇದೆ ಹಲ್ಲೆಗೊಂಡವರು
ಲೋಕಸಭಾ ಚುನಾವಣೆ ಏಪ್ರಿಲ್ 22 ರಂದು ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ದರ್ಶನ್ ಪ್ರಚಾರಕ್ಕೆ ನಟ ದರ್ಶನ್ ಆಗಮಿಸಿದ್ದರು. ಆ ವೇಳೆ ಗನ್ ಮ್ಯಾನ್ ನಾಗೇಶ್ ಜೊತೆ ನಟ ದರ್ಶನ್ ಪಟಾಲಂ ಗಲಾಟೆ ಮಾಡಲಾಗಿತ್ತು.
ಮುಖಂಡರನ್ನ ಹತ್ತಿರಕ್ಕೆ ಬಿಟ್ಟುಕೊಳ್ಳುವ ವಿಚಾರದಲ್ಲಿ ಮಣಿ, ಲಕ್ಷ್ಮಣ್, ಹಾಗೂ ಇತರರು ಜಗಳ ತೆಗೆದಿದ್ದರು. ಇದೇ ಜಗಳ ಮುಂದುವರೆಸಿ ಕದಲೂರು ಉದಯ್ ಮನೆ ಮುಂದೆ ಪೇದೆ ನಾಗೇಶ್ ಮೇಲೆ ಹಲ್ಲೆ ಮಾಡಲಾಗಿತ್ತು.
ಪೊಲೀಸರು ನಮ್ಮನ್ನ ಏನು ಮಾಡಲು ಆಗಲ್ಲ. ನಮ್ಮತ್ರ ಏನು ಕಿತ್ಕೊಳೋಕೆ ಆಗಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದರು.
ಮದ್ದೂರಿನ ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗೇಶ್ ಗೆ ಎಂಎಲ್ ಸಿ ಕೂಡ ಆಗಿತ್ತು. ನಂತರ ರಾಜಿ ಸಂಧಾನದ ಮೂಲಕ ನಾಗೇಶರನ್ನ ಶಾಸಕ ಉದಯ್ ಕಳುಹಿಸಿದ್ದರು.
ಇದಾದ ಬಳಿಕ ಉದಯ್ ಗನ್ ಮ್ಯಾನ್ ಹುದ್ದೆಯಿಂದ ನಾಗೇಶ್ ಹೊರ ಬಂದಿದ್ದರು. ಇದೀಗ ಡಿಎಆರ್ ತುಕಡಿಯಲ್ಲಿ ನಾಗೇಶ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗಲಾಟೆ ನಡೆದಿತ್ತು.