Friday, April 11, 2025
Google search engine

Homeಸಿನಿಮಾದರ್ಶನ್​ ನಟನೆಯ ‘ಶಾಸ್ತ್ರಿ’ ಸಿನಿಮಾ ಜುಲೈ 12ಕ್ಕೆ ಮರು ಬಿಡುಗಡೆ

ದರ್ಶನ್​ ನಟನೆಯ ‘ಶಾಸ್ತ್ರಿ’ ಸಿನಿಮಾ ಜುಲೈ 12ಕ್ಕೆ ಮರು ಬಿಡುಗಡೆ

ನಟ ದರ್ಶನ್​ ಮೇಲೆ ಗಂಭೀರ ಆರೋಪ ಎದುರಾಗಿದ್ದು, ಅವರೀಗ ಜೈಲು ವಾಸ ಅನುಭವಿಸುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅವರು ಎ2 ಆಗಿದ್ದಾರೆ. ಅವರು ಬೇಗ ಜಾಮೀನು ಪಡೆದು ಹೊರಬರಬೇಕು ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ. ಈ ನಡುವೆ ‘ಶಾಸ್ತ್ರಿ’ ಸಿನಿಮಾ ಮರು ಬಿಡುಗಡೆ ಮಾಡಲು ಗಾಂಧಿನಗರದಲ್ಲಿ ತಯಾರಿ ನಡೆದಿದೆ. ವಿತರಕ ವಿ.ಎಂ. ಶಂಕರ್​ ಅವರು ಈ ಸಿನಿಮಾವನ್ನು ರೀ-ರಿಲೀಸ್​ ಮಾಡುತ್ತಿದ್ದಾರೆ.

ಆದರೆ ಇದು ಸಡನ್​ ಪ್ಲ್ಯಾನ್​ ಅಲ್ಲ ಎಂದು ಅವರು ಹೇಳಿದ್ದಾರೆ. ‘ಈ ವಾರ ಕನ್ನಡದ ಬೇರೆ ಯಾವ ಸಿನಿಮಾ ಕೂಡ ಬಿಡುಗಡೆ ಆಗುತ್ತಿಲ್ಲ. ಹಾಗಾಗಿ ಚಿತ್ರಮಂದಿರದ ಮಾಲೀಕರು ರೀ-ರಿಲೀಸ್​ ಮಾಡಿ ಅಂತ ಮನವಿ ಮಾಡಿಕೊಂಡಿದ್ದಾರೆ. ರಾಜ್ಯಾದ್ಯಂತ 25 ರಿಂದ 50 ಚಿತ್ರಮಂದಿರಗಳಲ್ಲಿ ‘ಶಾಸ್ತ್ರಿ’ ಸಿನಿಮಾ ಬಿಡುಗಡೆ ಮಾಡುತ್ತೇವೆ. ಗಲಭೆ ಆಗಬಹುದು ಅಂತ ಕೆಲವು ಚಿತ್ರಮಂದಿರದ ಮಾಲಿಕರು ಯೋಚನೆ ಮಾಡುತ್ತಿದ್ದಾರೆ. ದರ್ಶನ್​ ಜೈಲಿಗೆ ಹೋಗಿದ್ದಕ್ಕೂ ‘ಶಾಸ್ತ್ರಿ’ ಮರು ಬಿಡುಗಡೆ ಮಾಡುತ್ತಿರುವುದಕ್ಕೂ ಯಾವುದೇ ಸಂಬಂಧ ಇಲ್ಲ. 6 ತಿಂಗಳ ಹಿಂದೆಯೇ ಇದಕ್ಕೆ ತಯಾರಿ ಮಾಡಿಕೊಂಡಿದ್ದೆವು’ ಎಂದು ವಿ.ಎಂ. ಶಂಕರ್ ಅವರು ಹೇಳಿದ್ದಾರೆ.ಈ ಸಿನಿಮಾಗೆ ಈಗ ಜನರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ.

RELATED ARTICLES
- Advertisment -
Google search engine

Most Popular