ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ರನ್ನು ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಇದೀಗ ನಟ ದರ್ಶನ್ ಗೆ ಜೈಲು ಅಧಿಕಾರಿಗಳು ಹೊಸ ಕೈದಿ ಸಂಖ್ಯೆ ನೀಡಿದ್ದಾರೆ.
ಬಳ್ಳಾರಿಯಲ್ಲಿ ನಟ ದರ್ಶನ್ಗೆ 511 ಸಂಖ್ಯೆ ನೀಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವೇಳೆ ನಟ ದರ್ಶನ್ಗೆ 6106 ಅನ್ನು ಕೈದಿ ಸಂಖ್ಯೆಯನ್ನಾಗಿ ನೀಡಲಾಗಿತ್ತು. ದರ್ಶನ್ ರ ಹಲವು ಅಭಿಮಾನಿಗಳು 6106 ಸಂಖ್ಯೆಯನ್ನು ಗಾಡಿಗಳ ಮೇಲೆ ಬರೆಸಿಕೊಂಡಿದ್ದರು. ಕೆಲವರು 6106 ಅನ್ನು ಹಚ್ಚೆಯಾಗಿ ಹಾಕಿಸಿಕೊಂಡರು. ಅಲ್ಲದೆ ,ಅಭಿಮಾನಿಯೊಬ್ಬರು ತನ್ನ ಮಗುವಿಗೂ ಕೈದಿ ರೀತಿ ಬಟ್ಟೆ ತೊಡಿಸಿ, ಅದರ ಮೇಲೆ 6106 ಎಂದು ಬರೆದು ಫೋಟೊ ತೆಗೆದಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಇದೀಗ ನಟ ದರ್ಶನ್ ಇಂದು ಬಳ್ಳಾರಿ ಜೈಲಿಗೆ ಪ್ರವೇಶಿಸುತ್ತಿದ್ದಂತೆ ಪೊಲೀಸರು ದರ್ಶನ್ ಹೆಸರು, ತಂದೆಯ ಹೆಸರು ಹಾಗೂ ವಿಳಾಸವನ್ನು ಜೈಲಿನ ಡೈರಿಯೊಳಗೆ ಬರೆದುಕೊಂಡಿದ್ದು, ಬಳಿಕ ವಿಚಾರಣಾಧೀನ ಕೈದಿ ಸಂಖ್ಯೆ 511 ನೀಡಿದ್ದಾರೆ.