ಮಂಡ್ಯ: ಕೊಲೆ ಪ್ರಕರಣ ನಟ ದರ್ಶನ್ ಅರೆಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಶಾಸಕ ಗಣಿಗ ರವಿಕುಮಾರ್ ಪ್ರತಿಕ್ರಿಯಿಸಿದ್ದು, ಇದನ್ನೆಲ್ಲ ಕಾನೂನು ನೋಡುತ್ತೆ ಎಂದು ಹೇಳುವ ಮೂಲಕ ಹೆಚ್ಚು ಮಾತನಾಡದೆ ಮೌನವಾದರು.
ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವ ವಿಚಾರವಾಗಿ ಮಾತನಾಡಿ, ಕುಮಾರಣ್ಣ ಅವರು ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿದ್ದಾರೆ ಒಳ್ಳೆಯದಾಗಲಿ. ನಮ್ಮ ರಾಜ್ಯಕ್ಕೆ ಒಳ್ಳೆಯದನ್ನು ಮಾಡಲಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಿ ಎಂದರು.