Friday, April 18, 2025
Google search engine

Homeರಾಜಕೀಯಮುಡಾ ಹಗರಣ ಡೈವರ್ಟ್ ಮಾಡಲು ದರ್ಶನ್ ಪ್ರಕರಣ ಮುನ್ನೆಲೆಗೆ ತಂದಿದ್ದಾರೆ : ಸಚಿವ ಪ್ರಹ್ಲಾದ್ ಜೋಶಿ...

ಮುಡಾ ಹಗರಣ ಡೈವರ್ಟ್ ಮಾಡಲು ದರ್ಶನ್ ಪ್ರಕರಣ ಮುನ್ನೆಲೆಗೆ ತಂದಿದ್ದಾರೆ : ಸಚಿವ ಪ್ರಹ್ಲಾದ್ ಜೋಶಿ ಆರೋಪ

ಹುಬ್ಬಳ್ಳಿ : ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿಬಂದಿರುವ ಮುಡಾ ಹಗರಣವನು ಡೈವರ್ಟ್ ಮಾಡಲು ರೇಣುಕಾಸ್ವಾಮಿ ಕೊಲೆ ಪ್ರಕಾರಣಕ್ಕೆ ಸಂಬಂಧಿಸಿದಂತೆ ದರ್ಶನ್ ಕೇಸ್ ಮುನ್ನೆಲೆಗೆ ತರಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೇಣುಕಾ ಸ್ವಾಮಿಯ ಬರ್ಬರ ಹತ್ಯೆ ಪ್ರಕರಣ ರೀಟ್ರಿವ್ ಮಾಡಿರುವ ಫೋಟೋ ಬಿಟ್ಟಿರುವುದು ಅಕ್ಷಮ್ಯ ಅಪರಾಧ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದರು. ಪರಪ್ಪನ ಅಗ್ರಹಾರ ಜೈಲಿನ ದರ್ಶನ್ ಫೋಟೋ ಹೊರಬಿಟ್ಟಿದ್ದೆ ಸರಕಾರ ಎಂದು ಆರೋಪಿಸಿದರು.

ರೇಣುಕಾ ಸ್ವಾಮಿ ಕೊಲೆ ಕರ್ನಾಟಕ ಕಂಡ ಅತ್ಯಂತ ಕ್ರೂರವಾದ ಹತ್ಯೆಯಾಗಿದೆ. ಮುಡಾ, ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ದೊಡ್ಡ ಚರ್ಚೆಯಾಯಿತು. ಮುಡಾ ವಿಚಾರ ಡೈವರ್ಟ್ ಮಾಡಲು ದರ್ಶನ್ ಕೇಸ್ ಮುನ್ನೆಲೆಗೆ ತಂದರು. ರಾಜ್ಯ ಸರ್ಕಾರ ಸಂಕುಚಿತ ಷಡ್ಯಂತ್ರ ನಡೆಸಿದೆ. ಈಗಲೂ ಸಹ ಕ್ರೂರವಾಗಿ ಹತ್ಯೆಗೈದ ಆರೋಪಿಗಳಿಗೆ ಶಿಕ್ಷೆ ಆಗಬೇಕು.

ರೀಟ್ರಿವ್ ಮಾಡಿರುವ ಫೋಟೋ ಬಿಟ್ಟಿರುವುದು ಅಕ್ಷ್ಮಮ್ಯ ಅಪರಾಧವಾಗಿದೆ. ಈ ವಿಚಾರವನ್ನು ನ್ಯಾಯಾಲಯ ಕೂಡ ಪರಿಗಣನೆಗೆ ತೆಗೆದುಕೊಳ್ಳುತ್ತದೆ.ಫೋಟೋ ಹೊರಗಡೆ ಬಿಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ವಿಷಯ ಡೈವರ್ಟ್ ಮಾಡೋಕೆ ರಾಜ್ಯ ಸರ್ಕಾರ ಈ ತರಹ ಮಾಡುತ್ತಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular