ಬೆಂಗಳೂರು: ನಾಪತ್ತೆಯಾಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ಕೊನೆಗೂ ಪತ್ತೆಯಾಗಿದ್ದ ಎನ್ನಲಾಗಿದೆ. ಸದ್ಯ ಆತ ಗೋವಾದಲ್ಲಿ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
೨೦೧೮ರಲ್ಲಿ ಹಣದ ವಂಚನೆ ಪ್ರಕಣದಲ್ಲಿ ದರ್ಶನ್ ಬಳಿಕ ಕೆಲಸದ ಮಾಡುತ್ತಿದ್ದ ಮಲ್ಲಿಕಾರ್ಜುನ್ ೭ ವರ್ಷಗಳಿಂದ ನಾಪತ್ತೆಯಾಗಿದ್ದು, ಈಗ ಆತ ಜೀವಂತವಾಗಿ ಇರುವ ಬಗ್ಗೆಯೇ ಅನುಮಾನ ಮೂಡಿಸಿತ್ತು. ಪ್ರೇಮ ಬರಹ ಸಿನಿಮಾದ ವಿರತಣಾ ಜವಾಬ್ದಾರಿಯನ್ನು ತೂಗುದೀಪಾ ಪ್ರೊಡಕ್ಷನ್ಸ್ ಗೆ ನೀಡಲಾಗಿತ್ತು. ಅದರ ಸಂ ಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದು ಮಲ್ಲಿಕಾರ್ಜುನ್ ಅವರೇ. ಸಿನಿಮಾ ಹಕ್ಕು ವಿತರಿಸಿ, ಹಣ ಬಂದ ನಂತರ ಮಲ್ಲಿಕಾರ್ಜುನ್ ಹಣ ತೆಗೆದುಕೊಂಡು ಪರಾರಿಯಾಗಿದ್ದ. ಸುಮಾರು ೭ ವರ್ಷಗಳ ಹಿಂದಿನ ನಾಪತ್ತೆಯಾಗಿದ್ದ ಮಲ್ಲಿಕಾರ್ಜುನ್ ಇದೂವರೆಗೂ ದರ್ಶನ್ ಕೈಗೆ ಸಿಕ್ಕಿರಲಿಲ್ಲ.
ಈ ನಡುವೆ ಮಲ್ಲಿಕಾರ್ಜುನ್ ಪತ್ತೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ದರ್ಶನ್ ರಿಂದ ನಮಗೆ ಯಾವುದೇ ತೊಂದರೆಯಾಗಿಲ್ಲ, ನಮಗೆ ಅವರಿಂದ ಒಂದು ಹೊತ್ತಿನ ಊಟ ಸಿಕ್ಕಿದೆ. ದಯವಿಟ್ಟು ನಮ್ಮ ಮನೆ ಬಳಿಗೆ ಯಾರು ಬರಬೇಡಿ ಅಂತ ಹೇಳಿದ್ದಾರೆ.ಇನ್ನೂ ಪತ್ರವನ್ನು ಬರೆದಿಟ್ಟು ಮಲ್ಲಿಕಾರ್ಜುನ್ ನಾಪತ್ತೆಯಾಗಿದ್ದರು, ಅದರಲ್ಲಿ ನನ್ನ ಯಾರು ಹುಡುಕ ಬೇಡಿ ನಾನೇ ಬರುವೆ, ಎಲ್ಲ ಸಾಲವನ್ನು ತೀರಿಸಬೇಕಾಗಿದ್ದ ಹೇಳಿದ್ದ ಎನ್ನಲಾಗಿದೆ.