Monday, April 7, 2025
Google search engine

Homeರಾಜ್ಯದರ್ಶನ್ ಆರೋಗ್ಯ ಸ್ಥಿರ;ಮನೆಯೂಟದ ಅಗತ್ಯವಿಲ್ಲ: ಕಾರಾಗೃಹ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಆದೇಶ

ದರ್ಶನ್ ಆರೋಗ್ಯ ಸ್ಥಿರ;ಮನೆಯೂಟದ ಅಗತ್ಯವಿಲ್ಲ: ಕಾರಾಗೃಹ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಆದೇಶ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತು ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್​​​ ಗೆ​​ ಸಂಕಷ್ಟ ಮುಂದುವರಿದಿದೆ. ಸದ್ಯ ಜೈಲೂಟವನ್ನೇ ಮಾಡಬೇಕಾದ ಪರಿಸ್ಥಿತಿಯಲ್ಲಿ ‌ನಟ ದರ್ಶನ ಇದ್ದಾರೆ.

ಮನೆಯೂಟಕ್ಕೆ ಅವಕಾಶ ನೀಡುವಂತೆ ಹೈಕೋರ್ಟ್​ಗೆ ಮೊರೆ ಹೋಗಿದ್ದ ದರ್ಶನ್​​​ಗೆ ಹಿನ್ನಡೆಯಾಗಿದ್ದು, ಕಾರಾಗೃಹ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ದರ್ಶನ್ ಆರೋಗ್ಯ ಸ್ಥಿರವಾಗಿದೆ. ಮನೆಯೂಟದ ಅಗತ್ಯವಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

ಮನೆಯೂಟ, ಹಾಸಿಗೆ, ಬಟ್ಟೆ ನೀಡಲು ಸಾಧ್ಯವಿಲ್ಲ. ಆರೋಪಿ ದರ್ಶನ್‌ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮನೆಯೂಟ ಕೊಡುವ ಪರಿಸ್ಥಿತಿ ನಿರ್ಮಾಣ ಆಗಿಲ್ಲ ಎಂದು ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಮನೆಯೂಟ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ.

ಜೈಲಿನ ವೈದ್ಯಾಧಿಕಾರಿಗಳ ವರದಿ ಆಧರಿಸಿ ಪ್ರಿಸನ್ ಡಿಜಿಪಿಯಿಂದ ಆದೇಶ ಹೊರಡಿಸಲಾಗಿದೆ. ದರ್ಶನ್ ಅವರಿಗೆ ಮನೆಯೂಟ ನೀಡುವ ಅಗತ್ಯ ಇಲ್ಲ ಎಂದು ಹಿಂಬರಹ ನೀಡಿದ್ದಾರೆ. ದರ್ಶನ್ ಅರ್ಜಿ ಕುರಿತು ತೆಗೆದುಕೊಂಡ ನಿರ್ಧಾರವನ್ನು ಜೈಲಿನ ಅಧಿಕಾರಿಗಳು ಹೈಕೋರ್ಟ್​​ಗೆ ತಿಳಿಸಲಿದ್ದಾರೆ.

ಜೈಲೂಟ ಒದಗಿಸುವ ಕುರಿತಂತೆ 10 ದಿನಗಳಲ್ಲಿ ದರ್ಶನ್ ಮನವಿಯನ್ನ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಹೈಕೋರ್ಟ್ ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ದರ್ಶನ್ ಮನವಿಯನ್ನ ಪರಿಶೀಲಿಸಿ ಪರಿಗಣಿಸುವುದಾಗಿ ಹೈಕೋರ್ಟ್ ಗೆ ಸರ್ಕಾರದ ಪರ ವಕೀಲರು ತಿಳಿಸಿದ್ದರು. ಈ ಸಂಬಂಧ ಆ.20ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ.

ಈ ನಡುವೆ ಕಾರಾಗೃಹ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ದರ್ಶನ್ ಆರೋಗ್ಯ ಸ್ಥಿರವಾಗಿದೆ. ಮನೆಯೂಟದ ಅಗತ್ಯವಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಇದೇ ನಿರ್ಧಾರವನ್ನು ಆಗಸ್ಟ್​ 20 ರಂದು ನಡೆಯಲಿರುವ ವಿಚಾರಣೆ ವೇಳೆ ಸರ್ಕಾರ ಹೈಕೋರ್ಟ್​​​​ಗೆ ತಿಳಿಸುವ ಸಾಧ್ಯತೆ ಇದೆ.

RELATED ARTICLES
- Advertisment -
Google search engine

Most Popular