Friday, April 4, 2025
Google search engine

HomeUncategorizedರಾಷ್ಟ್ರೀಯದೆಹಲಿ ವಿಧಾನಸಭೆಗೆ ದಿನಾಂಕ ನಿಗದಿ: ಫೆ.5 ಚುನಾವಣೆ, ಫೆ.8 ಫಲಿತಾಂಶ ಪ್ರಕಟ

ದೆಹಲಿ ವಿಧಾನಸಭೆಗೆ ದಿನಾಂಕ ನಿಗದಿ: ಫೆ.5 ಚುನಾವಣೆ, ಫೆ.8 ಫಲಿತಾಂಶ ಪ್ರಕಟ

ನವದೆಹಲಿ: ಬಹು ನಿರೀಕ್ಷಿತ 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.‌ ಫೆ.5ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಫೆ. 8ರಂದು ಫಲಿತಾಂಶ ಪ್ರಕಟವಾಗಲಿದೆ. ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬರಲಿದೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಜನವರಿ 10ರಂದು ಅಧಿಸೂಚನೆ ಹೊರಬೀಳಲಿದೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದರು.

ಜ. 17ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದು, ನಾಮಪತ್ರ ಪರಿಶೀಲನೆ ಜ. 18ರಂದು ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜ.20 ರಂದು ಅಂತಿಮ ದಿನವಾಗಿದೆ.

70 ಕ್ಷೇತ್ರಗಳ ದೆಹಲಿ ವಿಧಾನಸಭೆಯ ಅವಧಿ ಇದೇ ಫೆ.23ಕ್ಕೆ ಅಂತ್ಯವಾಗಲಿದ್ದು, ಅದಕ್ಕೂ ಮುನ್ನ ಹೊಸ ಸರ್ಕಾರ ರಚನೆಯಾಗಬೇಕಿದೆ.

ದೆಹಲಿ ಚುನಾವಣೆಗೆ ಮತ ಚಲಾವಣೆಗೆ 1.55 ಕೋಟಿ ಅರ್ಹ ಮತದಾರರಿದ್ದು, ಇದರಲ್ಲಿ 71.74 ಲಕ್ಷ ಮಹಿಳಾ ಮತದಾರರಿದ್ದಾರೆ. ಇನ್ನು, ಇದೇ ಮೊದಲ ಬಾರಿಗೆ ಹೊಸದಾಗಿ 2 ಲಕ್ಷ ಯುವ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಏಕ ಹಂತದಲ್ಲಿ ನಡೆಯುವ ಮತದಾನಕ್ಕಾಗಿ 13,000 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಮತದಾರರ ಪಟ್ಟಿಗೆ ಅಳಿಸುವಿಕೆ ಅಥವಾ ಸೇರ್ಪಡೆಯಲ್ಲಿ ಕಟ್ಟುನಿಟ್ಟಿನ ಪ್ರಕ್ರಿಯೆ ಅನುಸರಿಸಲಾಗಿದೆ. ಯಾವುದೇ ತಿರುಚುವಿಕೆಗೆ ಅವಕಾಶವಿಲ್ಲ ಎಂದು ಆಯುಕ್ತರು ಸ್ಪಪ್ಟಪಡಿಸಿದರು.

RELATED ARTICLES
- Advertisment -
Google search engine

Most Popular