Friday, April 11, 2025
Google search engine

Homeಅಪರಾಧಕಾನೂನುನಿವೃತ್ತಿಯ ನಂತರ ಜನ್ಮ ದಿನಾಂಕ ಬದಲಾಯಿಸಲಾಗುವುದಿಲ್ಲ: ಕರ್ನಾಟಕ ಹೈಕೋರ್ಟ್ ತೀರ್ಪು

ನಿವೃತ್ತಿಯ ನಂತರ ಜನ್ಮ ದಿನಾಂಕ ಬದಲಾಯಿಸಲಾಗುವುದಿಲ್ಲ: ಕರ್ನಾಟಕ ಹೈಕೋರ್ಟ್ ತೀರ್ಪು

ಬೆಂಗಳೂರು: ದಾಖಲಾದ ಜನ್ಮ ದಿನಾಂಕವನ್ನು ಉದ್ಯೋಗಿಯು ನಿವೃತ್ತಿಯ ನಂತರ ಬದಲಾಯಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಪಲ್ಪ್ ಡ್ರಾಯಿಂಗ್ ಪ್ರೊಸೆಸರ್ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡಿದ ವ್ಯಕ್ತಿಯನ್ನು ಒಳಗೊಂಡ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಈ ತೀರ್ಪು ನೀಡಿದೆ. ವ್ಯಕ್ತಿ ನೇಮಕಗೊಂಡಾಗ, ಅವರು ತಮ್ಮ ಜನ್ಮ ದಿನಾಂಕವನ್ನು ಮಾರ್ಚ್ 30, 1952 ಎಂದು ಮೌಖಿಕವಾಗಿ ನೀಡಿ ಯಾವುದೇ ಪುರಾವೆಯನ್ನು ನೀಡಿರಲಿಲ್ಲ.

ನ್ಯಾಯಮೂರ್ತಿ ಎಂ.ಜಿ. ಎಸ್ ಕಮಲ್ ಅವರ ಏಕಸದಸ್ಯ ಪೀಠ, ರಿಟ್ ಅರ್ಜಿಯೊಂದರ ವಿಚಾರಣೆ ವೇಳೆ ಉದ್ಯೋಗಿ ನಿವೃತ್ತಿಯ ನಂತರ ದಾಖಲಾದ ಜನ್ಮದಿನಾಂಕದಲ್ಲಿ ಬದಲಾವಣೆ ಕೋರುವಂತಿಲ್ಲ ಎಂದು ಹೇಳಿದೆ.

ಅರ್ಜಿದಾರರು 01.10.1983 ರಂದು ಉದ್ಯೋಗಕ್ಕೆ ಸೇರಿದ್ದರು ಮತ್ತು 09.03.2006 ರಂದು ಸೇವೆಯಿಂದ ನಿವೃತ್ತರಾದರು. ಅವರ ನೇಮಕಾತಿಯ ಸಮಯದಲ್ಲಿ, ಅರ್ಜಿದಾರರು ತಮ್ಮ ಜನ್ಮ ದಿನಾಂಕವನ್ನು 30.03.1952 ಎಂದು ಮೌಖಿಕವಾಗಿ ಒದಗಿಸಿದ್ದರು. ಆದಾಗ್ಯೂ, ಉದ್ಯೋಗದಾತರು ಅದನ್ನು 10.03.1948 ಎಂದು ದಾಖಲಿಸಿದ್ದಾರೆ. ಅರ್ಜಿದಾರರು ತಮ್ಮ ಭವಿಷ್ಯ ನಿಧಿ ಘೋಷಣೆಯಲ್ಲಿ ಒದಗಿಸಿದ ವಿವರಗಳು ಅವರ ಶಾಲೆಯ ಪ್ರಮಾಣಪತ್ರವನ್ನು ಆಧರಿಸಿದೆ.

ಈ ದಾಖಲಾದ ದಿನಾಂಕದ ಪ್ರಕಾರ, ಅರ್ಜಿದಾರರು 09.03.2006 ರಂದು 58 ರ ನಿವೃತ್ತಿ ವಯಸ್ಸನ್ನು ತಲುಪಿದ್ದು, ಅರ್ಜಿದಾರರು ತಮ್ಮ ಭವಿಷ್ಯ ನಿಧಿ (ಪಿಎಫ್) ಘೋಷಣೆಯಲ್ಲಿ ಒದಗಿಸಿದ ವಿವರಗಳು ಮತ್ತು ಅವರ ಶಾಲೆಯಿಂದ ಪ್ರಮಾಣಪತ್ರವನ್ನು ಆಧರಿಸಿದೆ. ಈ ದಾಖಲಾದ ದಿನಾಂಕದ ಪ್ರಕಾರ, ಅರ್ಜಿದಾರರು 09.03.2006 ರಂದು 58 ರ ನಿವೃತ್ತಿ ವಯಸ್ಸನ್ನು ತಲುಪಿದ್ದರು.

RELATED ARTICLES
- Advertisment -
Google search engine

Most Popular