Tuesday, April 7, 2026
Google search engine

Homeಸಿನಿಮಾಥಳಪತಿ ವಿಜಯ್ ಜೊತೆಗಿನ ಡೇಟಿಂಗ್ ವದಂತಿ : ಮೌನ ಮುರಿದ ನಟಿ ತ್ರಿಶಾ ಕೃಷ್ಣನ್!

ಥಳಪತಿ ವಿಜಯ್ ಜೊತೆಗಿನ ಡೇಟಿಂಗ್ ವದಂತಿ : ಮೌನ ಮುರಿದ ನಟಿ ತ್ರಿಶಾ ಕೃಷ್ಣನ್!

ಚೆನ್ನೈ : ಕಾಲಿವುಡ್‌ ನ ಸ್ಟಾರ್ ನಟ ಥಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಅವರ ಡೇಟಿಂಗ್ ವದಂತಿಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಇದೀಗ ಈ ಎಲ್ಲಾ ಅಂತೆಕಂತೆಗಳ ನಡುವೆ ನಟಿ ತ್ರಿಶಾ ಹಂಚಿಕೊಂಡಿರುವ ಸರಣಿ ಪೋಸ್ಟ್‌ಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ.

ಪ್ರೀತಿ ಕುರಿತು ತ್ರಿಶಾ ಹೇಳಿದ್ದೇನು?

ಸಿನಿಮಾ ತಾರೆಯರ ಖಾಸಗಿ ಜೀವನದ ಬಗ್ಗೆ ಗಾಸಿಪ್‌ ಗಳು ಹರಡುವುದು ಸಾಮಾನ್ಯ. ಆದರೆ, ವಿಜಯ್ ಮತ್ತು ತ್ರಿಶಾ ಜೋಡಿಯ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳ ನಡುವೆ ತ್ರಿಶಾ ತಮ್ಮ ಇನ್‌ ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

“ಪ್ರೀತಿಯೇ ಎಲ್ಲವೂ ಅಲ್ಲ, ಆದರೆ ಪ್ರೀತಿ ಇಲ್ಲದೆ ಯಾವುದಕ್ಕೂ ಅರ್ಥವಿಲ್ಲ” ಎಂಬ ಬರಹವನ್ನು ಹಂಚಿಕೊಳ್ಳುವ ಮೂಲಕ ತ್ರಿಶಾ ಪರೋಕ್ಷವಾಗಿ ತಮ್ಮ ಭಾವನೆಗಳನ್ನು ಹೊರಹಾಕಿದ್ದಾರೆ.

“ಶಾಂತಿ ಮುಖ್ಯ, ವಾದವಲ್ಲ” – ವೈರಲ್ ವಿಡಿಯೋ ಸಂದೇಶ

ಕೇವಲ ಬರಹ ಮಾತ್ರವಲ್ಲದೆ, ತ್ರಿಶಾ ಒಂದು ವಿಶೇಷ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಅದರಲ್ಲಿರುವ ಸಾಲುಗಳು ಹೀಗಿವೆ: “ನಾನು ಈಗ ಜೀವನದ ಅಂತಹ ಸಂದರ್ಭದಲ್ಲಿದ್ದೇನೆ, ಯಾರಾದರೂ ಆನೆ ಹಾರುತ್ತದೆ ಎಂದು ಹೇಳಿದರೂ ನಾನು ವಾದ ಮಾಡದೆ ಒಪ್ಪಿಕೊಳ್ಳುತ್ತೇನೆ. ಯಾಕೆಂದರೆ ನನಗೆ ಶಾಂತಿ ಮುಖ್ಯವೇ ಹೊರತು, ನಾನು ಸರಿ ಎಂದು ಸಾಬೀತುಪಡಿಸುವುದಲ್ಲ.”

“ಮೌನವಾಗಿರುವುದು ಯಾರಿಗಾದರೂ ವಿವರಣೆ ನೀಡುವುದಕ್ಕಿಂತ ಉತ್ತಮ. ಪ್ರತಿಯೊಬ್ಬರಿಗೂ ನಮ್ಮ ಎನರ್ಜಿಯನ್ನು ವ್ಯಯ ಮಾಡುವ ಅವಕಾಶ ನೀಡಬಾರದು.”

ಈ ಪೋಸ್ಟ್ ಮೂಲಕ ಅವರು ತಮ್ಮ ಬಗ್ಗೆ ಹರಡುತ್ತಿರುವ ವದಂತಿಗಳಿಗೆ ತಲೆಕೆಡಿಸಿಕೊಳ್ಳದೆ, ಮಾನಸಿಕ ಶಾಂತಿಗೆ ಹೆಚ್ಚಿನ ಒತ್ತು ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ವದಂತಿಗೆ ಕಾರಣವೇನು?

ನಟ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ನಡುವಿನ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಇತ್ತೀಚೆಗೆ ಕೇಳಿಬಂದಿದ್ದವು. ಇದರ ಬೆನ್ನಲ್ಲೇ ವಿಜಯ್ ಮತ್ತು ತ್ರಿಶಾ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಈ ಡೇಟಿಂಗ್ ವದಂತಿಗಳಿಗೆ ತುಪ್ಪ ಸುರಿದಂತಾಗಿತ್ತು.

ತೆರೆಯ ಮೇಲಿನ ಹಿಟ್ ಜೋಡಿ:

ವಿಜಯ್ ಮತ್ತು ತ್ರಿಶಾ ಈ ಹಿಂದೆ ‘ಗಿಲ್ಲಿ’, ‘ತಿರುಪ್ಪಾಚಿ’, ‘ಆತಿ’ ಮತ್ತು ‘ಕುರುವಿ’ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಜೋಡಿಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಇಂದಿಗೂ ಇಷ್ಟಪಡುತ್ತಾರೆ. ಇತ್ತೀಚೆಗೆ ತೆರೆಕಂಡ ‘ಲಿಯೋ’ ಚಿತ್ರದಲ್ಲೂ ಇವರು ದಶಕಗಳ ನಂತರ ಒಂದಾಗಿ ನಟಿಸಿದ್ದರು.

ಸದ್ಯಕ್ಕೆ ತ್ರಿಶಾ ಅವರ ಈ ‘ಶಾಂತಿಯ ಮಂತ್ರ’ದ ಪೋಸ್ಟ್‌ ಗಳು ವದಂತಿಗಳಿಗೆ ಬ್ರೇಕ್ ಹಾಕುತ್ತವೆಯೇ ಅಥವಾ ಹೊಸ ಚರ್ಚೆಗೆ ದಾರಿ ಮಾಡಿಕೊಡುತ್ತವೆಯೇ ಎಂಬುವುದನ್ನು ಕಾದುನೋಡಬೇಕಿದೆ.

RELATED ARTICLES
- Advertisment -
Google search engine

Most Popular