ಮಂಡ್ಯ: ಮಳವಳ್ಳಿ ತಾಲೂಕಿನಲ್ಲಿರುವ ಧಾರ್ಮಿಕ ಕ್ಷೇತ್ರ ಮತ್ತತ್ತಿ ಬಳಿ ಕಾವೇರಿ ನದಿಯ ಪ್ರವಾಹದಲ್ಲಿ ವ್ಯಕ್ತಿ ಕೊಚ್ಚಿ ಹೋದ ಹಿನ್ನಲೆ ಪ್ರವಾಸಿ ತಾಣಮುತ್ತತ್ತಿಗೆ ಜಿಲ್ಲಾಧಿಕಾರಿ ಡಾ.ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಂದಾಯ ಅಧಿಕಾರಿಗಳಿಂದ ಪ್ರವಾಹದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಅಧಿಕಾರಿಗಳಿಗೆ ಪ್ರವಾಹ ಪರಿಸ್ಥಿತಿ ಸೂಕ್ತವಾಗಿ ನಿಭಾಯಿಸುವಂತೆ ನಿರ್ದೇಶನ ನೀಡಿದರು.
ನದಿ ಪಾತ್ರದ ಪ್ರವಾಸಿ ತಾಣಗಳ ಬಳಿ ಜನರು ನದಿ ಬಳಿ ತೆರಳದಂತೆ ಅಗತ್ಯ ಕ್ರಮ ವಹಿಸುವಂತೆ ಡಿಸಿ ಸೂಚನೆ ನೀಡಿದರು.
ಜನರು ಕೂಡ ಯಾರು ನದಿ ಬಳಿ ತೆರಳಬಾರದು ಎಚ್ಚರಿಕೆಯಿಂದ ಇರಬೇಕೆಂದು ಡಿಸಿ ಮನವಿ ಮಾಡಿದರು.