Tuesday, April 8, 2025
Google search engine

Homeರಾಜ್ಯಸುದ್ದಿಜಾಲಹಿರಿಯ ಮತದಾರನಾಗರಿಕರಿಗೆ ಜಿಲ್ಲಾಡಳಿತದಿಂದ ಡಿಸಿ ಗುರುದತ್ತ ಹೆಗಡೆ ಗೌರವ ಸಮರ್ಪಣೆ

ಹಿರಿಯ ಮತದಾರನಾಗರಿಕರಿಗೆ ಜಿಲ್ಲಾಡಳಿತದಿಂದ ಡಿಸಿ ಗುರುದತ್ತ ಹೆಗಡೆ ಗೌರವ ಸಮರ್ಪಣೆ

ಧಾರವಾಡ: ಧಾರವಾಡ ಜಿಲ್ಲಾಡಳಿತದಿಂದ ಇಂದು ಹಿರಿಯ ನಾಗರಿಕರ ದಿನಾಚರಣೆ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ನೂರು ವರ್ಷ ದಾಟಿದ ಹಿರಿಯ ಮತದಾರರ ಮನೆಗೆ ತೆರಳಿ, ಅಭಿನಂದನ ಪತ್ರ, ಶಾಲು, ಹಾರ ಮತ್ತು ಫಲ ಪುಷ್ಪ ನೀಡಿ, ಗೌರವಿಸಿದರು.

ಅವರು ಇಂದು ಬೆಳಿಗ್ಗೆ, ಸಪ್ತಾಪುರ ಎಂಟನೆಯ ಕ್ರಾಸ್ ನಿವಾಸಿ ರಾಜಾಬಾಯಿ ಕೃಷ್ಣರಾವ್ ಚಿಕ್ಕೆರೂರ (103) ಅವರನ್ನು ಮತ್ತು ಕಲ್ಯಾಣನಗರದ ನಿವಾಸಿ ಶಾಂತಾಬಾಯಿ ಛಬ್ಬಿ (101) ಅವರನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸನ್ಮಾನಿಸಿ, ಗೌರವಿಸಿದರು. ಹಿರಿಯ ನಾಗರಿಕರ ಯೋಗಕ್ಷೇಮ ವಿಚಾರಿಸಿದ ಅವರು, ಅಗತ್ಯ ಸೌಲಭ್ಯ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಯುವ ಮತದಾರರಿಗೆ ಹಿರಿಯ ನಾಗರಿಕರು ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಸಾಧನಕೇರಿ ನಿವಾಸಿ ಕುಸುಮಾ ಕೀರ್ಲೊಸ್ಕರ್, ಕಿಲ್ಲಾ ನಿವಾಸಿ ರಾಮಸ್ವಾಮಿ ಕೆ.ಪಿ. ಸಾರಸ್ವತಪುರದ ಗಿರಿಜಾಬಾಯಿ ನರಗುಂದ ಮತ್ತು ತಂಗವ್ವ ಕರಿಕಟ್ಟಿ ಅವರನ್ನು ಅವರ ಮನೆಗಳಿಗೆ ತೆರಳಿ, ಅಧಿಕಾರಿಗಳು ಗೌರವಿಸಿದರು. ಈ ಸಂದರ್ಭದಲ್ಲಿ ಸಹಾಯಕ ಮತದಾರ ನೋಂದಣಿ ಅಧಿಕಾರಿ ಉನೇಶ ಸವಣೂರ, ಮಹಾನಗರ ಪಾಲಿಕೆ ವಲಯ ಕಚೇರಿ 12 ರ ಶಂಕರ ಪಾಟೀಲ, ಸಮುದಾಯ ಸಂಘಟನಾ ಅಧಿಕಾರಿ ವಿದ್ಯಾವತಿ ತೆಲಗಾರ, ವಿಜಯಲಕ್ಷ್ಮಿ ಸೇರಿದಂತೆ ಸನ್ಮಾನಿತರ ಕುಟುಂಬ ಸದಸ್ಯರು ಇದ್ದರು.

RELATED ARTICLES
- Advertisment -
Google search engine

Most Popular