ಚನ್ನಪಟ್ಟಣದಲ್ಲಿ ಬೃಹತ್ ಉದ್ಯೋಗ ಮೇಳ
ರಾಮನಗರ: ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಜನರು ನಗರಗಳಿಗೆ ವಲಸೆ ಹೋಗುತ್ತಾರೆ ಹಾಗಾಗಿ ಜಿಲ್ಲಾ ಮಟ್ಟದಲ್ಲಿಯೇ ಉದ್ಯೋಗಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದಿಂದ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ, ಅರ್ಹರು ಇದರ ಸದುಪಯೋಗ ಪಡಿಸಿಕೊಳ್ಳಬೇಕು, ಅವಕಾಶಗಳು ಹುಡುಕಿಕೊಂಡು ಬರಲ್ಲ ನಾವೇ ಹೋಗಬೇಕು ಎಂದು ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಅವರು ಆ. ೩೦ರ ಶುಕ್ರವಾರ ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಬೃಹತ್ ಉದ್ಯೋಗ ಮೇಳದಲ್ಲಿ ೧೦ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ, ೮ ಸಾವಿರಕ್ಕೂ ಹೆಚ್ಚು ಸಂದರ್ಶನ ನೀಡಿದ್ದಾರೆ, ಉದ್ಯೋಗ ನೀಡುವ ೨೪೦ ಕಂಪನಿಗಳು ಕೆಲಸ ನೀಡಲು ಬಂದಿವೆ, ಬೆಂಗಳೂರಿನ ಹೊರಗೂ ಉದ್ಯೋಗ ಅವಕಾಶಗಳಿದ್ದು, ಯುವಕರು ಅದನ್ನು ಕಳೆದುಕೊಳ್ಳಬಾರದು, ಉದ್ಯೋಗ ದೊರತ ನಂತರವು ಅಭ್ಯರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಬೇಕು, ಆಗ ನೀವು ಕೂಡ ಇತರರಿಗೆ ಕೆಲಸ ಕೊಡಬಹ್ಮದು, ಇಂತಹ ಸಂದರ್ಭದಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಳ್ಳಬೇಕು. ಸಾಧಿಸಿವ ಛಲ ಇರಬೇಕು, ನಿಮ್ಮ ಪ್ರತಿಭೆಗೆ ಒಂದಲ್ಲ ಒಂದು ದಿನ ಅವಕಾಶ ದೊರೆಯಲಿದೆ, ಪ್ರಯತ್ನ ಬಿಡಬಾರದು ಎಂದು ಕಿವಿ ಮಾತು ಹೇಳಿದರು.
ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ಚನ್ನಪಟ್ಟಣ ತಾಲ್ಲೂಕಿನ ಜನರ ಬದುಕಿನ ಗುಣಮಟ್ಟದ ಬದಲಾವಣೆಗೆ ಅವರ ಬದುಕಿಗೆ ಹೊಸರೂಪ ಕೊಡಲು ಪ್ರಯತ್ನಿಸಲಾಗುತ್ತಿದೆ. ಒಂದು ಕಾಲದಲ್ಲಿ ಅತಿಹೆಚ್ಚು ಪದವೀಧರರನ್ನು ಹೊಂದಿದ್ದ ಈ ತಾಲ್ಲೂಕಿಗೆ ಅಪೂರ್ವ ಇತಿಹಾಸವಿದೆ, ಮುಖ್ಯಮಂತ್ರಿಯವರು ಚನ್ನಪಟ್ಟಣದಲ್ಲಿ ವಿವಿಧ ರೀತಿಯ ಅಭಿವೃದ್ದಿ ಕೆಲಸಗಳಿಗೆ ೧೫೦ಕೋಟಿ ರೂ.ಗಳನ್ನು ನೀಡಿದ್ದಾರೆ, ವಸತಿ ಇಲಾಖೆಯಿಂದ ೫ ಸಾವಿರ ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾ. ಶರಣ ಪ್ರಕಾಶ ರುದ್ರಪ್ಪ ಪಾಟೀಲ್ ಮಾತನಾಡಿ, ಈ ಬೃಹತ್ ಉದ್ಯೋಗ ಮೇಳವುಉದ್ಯೋಗವಕಾಶ ನೀಡುವ ಉತ್ತಮ ವೇದಿಕೆಯಾಗಿದೆ, ನಿರುದ್ಯೋಗಿಗಳಿಗೆ ಉದ್ಯೋಗಗಳು ದೊರೆಯಲಿದೆ. ೨೦೦ಕ್ಕೂ ಹೆಚ್ಚು ಉದ್ಯೋಗ ನೀಡುವ ಕಂಪನಿಗಳು ಇದರಲ್ಲಿ ನೋಂದಾಯಿಸಿಕೊಂಡಿದ್ದು, ೮೦೦೦ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಇಲ್ಲಿ ಭಾಗಿಯಾಗಿದ್ದಾರೆ. ಇದು ಯಶಸ್ವಿ ಉದ್ಯೋಗ ಮೇಳವಾಗಿದ್ದು, ರಾಮನಗರ ಜಿಲ್ಲೆಯ ಜನತೆ ಇದರ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಯುವಕರ ಬಗ್ಗೆ ಕಾಳಜಿ ಹೊಂದಿರುವ ಸರ್ಕಾರ ನಿರುದ್ಯೋಗ ನಿವಾರಣೆಗಾಗಿ ಈ ರೀತಿಯ ಉದ್ಯೋಗ ಮೇಳಗಳನ್ನು ಆಯೋಜಿಸ್ಮತ್ತಿದೆ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸಹ ಈ ರೀತಿಯ ಉದ್ಯೋಗ ಮೇಳದ ಆಯೋಜನೆಗೆ ಬಹಳ ಮುತುವರ್ಜಿ ವಹಿಸಿದ್ದಾರೆ. ಯುವಕರಿಗೆ ಉದ್ಯೋಗ ನೀಡುವ ಸಲುವಾಗಿ ಹಾಗೂ ಯುವ ಜನತೆಯ ಮೇಲಿನ ಕಾಳಜಿಯಿಂದ ರಾಜ್ಯ ಸರ್ಕಾರ ಯುವ ನಿಧಿ ಯೋಜನೆ ಪ್ರಾರಂಭಿಸಿದ್ದು, ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ಉದ್ಯೋಗ ವಿಲ್ಲದ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
ರಾಜ್ಯದಲ್ಲಿ ಇದುವರೆಗೂ ೧.೬೦ ಲಕ್ಷ ಆಕಾಂಕ್ಷಿಗಳು ಯುವ ನಿಧಿ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ, ಸರ್ಕಾರ ಅವರಿಗೆ ೨ ವರ್ಷ ನಿರುದ್ಯೋಗ ಭತ್ಯೆ ನೀಡಲಿದೆ, ಡಿಪ್ಲೊಮಾ ಹಾಗೂ ಪದವಿ ಮುಗಿಸಿದ ಯುವಕರು ಉದ್ಯೋಗಕ್ಕಾಗಿ ವಿವಿಧೆಡೆ ಸಚಿದರ್ಶನಕ್ಕೆ ತೆರಳುವ ಸಮಯದಲ್ಲಿ ಮನೆಯಲ್ಲಿ ಹಣ ಕೇಳಬಾರದು, ಅವರ ಪ್ರಯಾಣ ಇತ್ಯಾದಿಗಳಿಗಾಗಿ ಯುವನಿಧಿ ಭತ್ಯೆಯನ್ನು ನೀಡಲಾಗುತ್ತಿದೆ. ಇದು ಕೇವಲ ಪರಿಹಾರ ಕಲ್ಪಿಸುವುದಲ್ಲದೇ ಅವರಿಗೆ ಉದ್ಯೋಗ ಕೊಡಿಸುವ ಸದುದ್ದೇಶ ಕೂಡ ಹೊಂದಿದೆ. ಅವರಿಗೆ ವಿವಿಧ ರಂಗಗಳಿಗೆ ಹೆಚ್ಚಿನ ತರಬೇತಿ ಕೌಶಲ್ಯ ಕೊಡಿಸಿ ಉದ್ಯೋಗ ಕೊಡಿಸಲಾಗುವುದು.
ರಾಜ್ಯದಲ್ಲಿ ೨೫,೦೦೦ಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಹೆಚ್ಚುವರಿಯಾಗಿ ಕೌಶಲ್ಯವನ್ನು ಕೊಡಿಸಲಾಗುವುದು, ಇಷ್ಟಲ್ಲದೇ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ರಾಜ್ಯದಲ್ಲಿ ೩ ಬಹು ಕೌಶಲ್ಯಾಭಿವೃದ್ದಿ ಕೇಂದ್ರಗಳನ್ನು ತೆರೆದು ಅಲ್ಲಿ ವಿವಿಧ ರೀತಿಯ ತರಬೇತಿ ಕೊಡಿಸಿ ಉದ್ಯೋಗ ಕೊಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ಬೆಂಗಳೂರಿನಲ್ಲಿ ಇದೇ ರೀತಿಯ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು. ಅಲ್ಲಿ ೮೦,೦೦೦ ಮಂದಿ ನೋಂದಣಿಯಾಗಿದ್ದರು. ಅವರಲ್ಲಿ ೫೦,೦೦೦ ಜನರು ನೇರವಾಗಿ ಹಾಜರಾಗಿದ್ದರು. ೪-೫ಸಾವಿರ ಆಕಾಂಕ್ಷಿಗಳಿಗೆ ಉದ್ಯೋಗ ದೊರೆಯಿತು, ಮುಂಬರುವ ದಿನಗಳಲ್ಲಿ ಮೈಸೂರಿನಲ್ಲಿ ಇದೇ ರೀತಿಯ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗುವುದು. ಈ ಉದ್ಯೋಗ ಮೇಳದಲ್ಲಿ ನೋಂದಣಿ ಮಾಡಿಕೊಂಡು ಉದ್ಯೋಗ ದೊರೆಯದೇ ಇರುವವರು ನಿರಾಶೆಪಡುವಂತಿಲ್ಲ. ಅವರ ಡಾಟಾ ಲಭ್ಯವಿದ್ದು, ಉತ್ತಮ ಅವಕಾಶಗಳ ಮಾಹಿತಿಯನ್ನು ಉದ್ಯೋಗಾಕಾಂಕ್ಷಿಗಳೀಗೆ ನೀಡಲಾಗುವುದು ಎಂದು ಹೇಳಿದರು.
ಸಾರಿಗೆ, ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ರಾಜ್ಯದಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡಲು ಸರ್ಕಾರ ಆದ್ಯತೆ ಮೇರೆಗೆ ಈ ಕಾರ್ಯಕ್ರಮವನ್ನು ರೂಪಿಸಿದೆ. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಆದವರು ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಿದರೆ ವಿವಿಧ ರೀತಿಯ ಉದ್ಯೋಗಗಳು ದೊರೆಯಲಿದೆ ಎಂದರು.

ಈ ಉದ್ಯೋಗ ಮೇಳದಲ್ಲಿ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಉದ್ಯೋಗ ಮೇಳಗಳನ್ನು ಮಾಡಲು ಚಿಂತನೆ ನಡೆಸಲಾಗಿದೆ. ಉದ್ಯೋಗ ಗಳಿಸಲು ಇಚಿಜಿನಿಯರಿಂಗ್, ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿದ್ದರೆ ಸಾಲದು ನಿರುದ್ಯೋಗಿಗಳಿಗೆ ಕೌಶಲ್ಯವು ಸಹ ಇರಬೇಕು. ವಿದ್ಯಾರ್ಹತೆಯ ಜೊತೆಗೆ ಕೌಶಲ್ಯವು ಇದ್ದರೆ ಸುಲಭವಾಗಿ ಉದ್ಯೋಗ ಗಳಿಸಬಹುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿವಿಧ ಕಂಪನಿಗಳಲ್ಲಿ ಕೆಲಸ ಪಡೆದ ಅರ್ಹರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತ ನಾಯಕ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಶಾಸಕರು ಹಾಗೂಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ಎಚ್.ಸಿ. ಬಾಲಕೃಷ್ಣ, ವಿಧಾನ ಪರಿಷತ್ ಶಾಸಕರಾದ ಎಸ್. ರವಿ, ರಾಮೋಜಿಗೌಡ, ಸ್ಮಧಾಮ್ ದಾಸ್, ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನಾಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ರಘುನಂದನ್ ರಾಮಣ್ಣ, ರಾಮನಗರ ಜಿಲ್ಲೆಯ ಗ್ಯಾರಂಟಿ ಯೋಜನೆ ಅಧ್ಯಕ್ಷ ರಾಜು, ಚನ್ನಪಟ್ಟಣ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್,ಮುಖಂಡರಾದ ಗಂಗಾಧರ್, ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಕನಗವಲ್ಲಿ,ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ,ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪುಷ್ಪಲತಾ ಎಂ.ಸಿ, ಹಾಗೂ ಇತರೆ ಗಣ್ಯರು ವೇದಿಕೆಯಲ್ಲಿದ್ದರು. ಸಹಸ್ರಾರು ಉದ್ಯೋಗಾಕಾಂಕ್ಷಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.