ಮಂಗಳೂರು: ಸುರತ್ಕಲ್ ಹಳೆ ಟೋಲ್ ಗೇಟ್ ಬಳಿ ಸತ್ತ ಕುರಿಗಳನ್ನು ಎಸೆದು ಹೋಗಿರುವ ಘಟನೆಗೆ ಸಂಬಂಧಿಸಿ ಕಾವೂರು ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಸುಮಾರು ೧೫ ಸತ್ತ ಕುರಿಗಳನ್ನು ಯಾರೋ ಸುರತ್ಕಲ್ ಓIಖಿಏ ಹಳೆ ಟೋಲ್ ಗೇಟ್ ಬಳಿ ಎಸೆದು ಹೋಗಿದ್ದು, ಸ್ಥಳೀಯರು ೨ನೇ ವಾರ್ಡ್ ನ ಕಾರ್ಪೋರೇಟರ್ ಶ್ವೇತಾ ಪೂಜಾರಿ ಇವರಿಗೆ ಮಾಹಿತಿ ನೀಡಿದ ಮೇರೆಗೆ ಅವರು ಮಹಾನಗರಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿ ರೊಂದಿಗೆ ಸ್ಥಳಕ್ಕೆ ಹೋಗಿ ಸತ್ತ ಕುರಿಗಳ ಮೃತ ದೇಹಗಳನ್ನು ಸುರಕ್ಷಿತ ಸ್ಥಳದಲ್ಲಿ ಧಫನ ಮಾಡಿಸಿದ್ದಾರೆ.
ಉತ್ತರ ಕರ್ನಾಟಕ ಕಡೆಯಿಂದ ಕುರಿಸಾಗಾಟ ವಾಹನಗಳಲ್ಲಿ ಮಂಗಳೂರಿಗೆ ಕುರಿ ಮಾರಾಟ ಮಾಡುವ ವ್ಯಾಪಾರಿಗಳು ಸಾಗಾಟದ ವೇಳೆ ಮೃತ ಪಟ್ಟ ಕುರಿಗಳನ್ನು ವಾಪಾಸು ಹೋಗುವ ವೇಳೆಗೆ ರಸ್ತೆ ಪಕ್ಕದಲ್ಲಿ ಪೊದೆಗಳಲ್ಲಿ ಎಸೆದು ಹೋಗಿರಬಹುದು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.