Friday, April 4, 2025
Google search engine

Homeಕಾಡು-ಮೇಡುಮೊಳೆಯೂರು ಅರಣ್ಯದಲ್ಲಿ ಹುಲಿಯ ಶವ ಪತ್ತೆ: ಕಾದಾಟದಿಂದ ಸಾವು ಶಂಕೆ

ಮೊಳೆಯೂರು ಅರಣ್ಯದಲ್ಲಿ ಹುಲಿಯ ಶವ ಪತ್ತೆ: ಕಾದಾಟದಿಂದ ಸಾವು ಶಂಕೆ

ಸರಗೂರು: ಎರಡು ಹುಲಿಗಳ ಕಾದಾಟದಿಂದಾಗಿ ೧ ರಿಂದ ೨ ವರ್ಷದ ಹುಲಿಯೊಂದು ಸಾವನ್ನಪ್ಪಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ತಾಲೂಕಿನ ಮೊಳೆಯೂರು ವಲಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಹೆಡಿಯಾಲ ಉಪ ವಿಭಾಗದ ವ್ಯಾಪ್ತಿಯ ಮೊಳೆಯೂರು ವಲಯದಲ್ಲಿ ಮೊಳೆಯೂರು ಶಾಖೆಯ ನಡಾಡಿ ಗಸ್ತಿನಲ್ಲಿ ಸಿಬ್ಬಂದಿಗಳು ಸೆನ್ಸ್‌ಸ್ ಲೈನ್ ಸಮೀಪದಲ್ಲಿ ಮೃತಪಟ್ಟಿರುವ ಹುಲಿಯ ಕಳೇಬರ ಪತ್ತೆಯಾಗಿದ್ದು, ಹುಲಿಯ ಕತ್ತು ಮುರಿದಿರುವುದರಿಂದ ಮತ್ತೊಂದು ಹುಲಿಯ ಕಾದಾಟದಿಂದಾಗಿ ಮೃತಪಟ್ಟಿರಬಹುದು ಎಂದು ಇಲಾಖೆ ದೃಢಪಡಿಸಿದೆ. ಕಾಡುನಾಯಿಗಳು, ಮಾಂಸದಕಳೇಬರವನ್ನು ತಿನ್ನುವ ಜೀವಿಗಳು ಹುಲಿಯ ಮೃತದೇಹವನ್ನು ತಿಂದಿರುವುದರಿಂದ ಹುಲಿಯ ಲಿಂಗ ಪತ್ತೆಯಾಗಿಲ್ಲ. ಬದಲಿಗೆ ೧ರಿಂದ ೨ ವರ್ಷ ವಯಸ್ಸಿರಬಹುದು ಎಂದು ಮರಣೊತ್ತರ ಪರೀಕ್ಷೆ ನಡೆಸಿದ ಇಲಾಖಾ ಪಶುವೈದ್ಯಾಧಿಕಾರಿ ಡಾ.ವಾಸಿಂ ಮಿರ್ಜಾ ಅವರು ತಿಳಿಸಿದ್ದಾರೆ.

ಬಳಿಕ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯ ವಿಧಾನದಂತೆ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅಗ್ನಿಸ್ಪರ್ಶ ಮಾಡಲಾಯಿತು. ಹುಲಿ ಯೋಜನೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿಂಗರಾಜು, ಆನೆ ಯೋಜನೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್, ಸಿಫ್ ಡಾ.ಪಿ.ರಮೇಶ್‌ಕುಮಾರ್, ವಿಶೇಷ ಹುಲಿ ಸಂರಕ್ಷಣಾ ದಳ ಅರಣ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್.ನವೀನ್, ಎಸಿಎಫ್ ಕೆ.ಪರಮೇಶ್, ವನ್ಯಜೀವಿ ಮಂಡಳಿ ಸದಸ್ಯೆ ಕೃತಿಕಾ ಆಲನಹಳ್ಳಿ, ಎನ್‌ಜಿಓ ರಘುರಾಂ, ಆರ್‌ಎಫ್‌ಒ ಪುನೀತ್, ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular