ಪಿರಿಯಾಪಟ್ಟಣ: ತಾಲೂಕಿನ ಪಂಚವಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಅಂದಾಜು 40 ರಿಂದ 45 ವರ್ಷದ ಅಪರಿಚಿತ ಪುರುಷ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ವಾರಸುದಾರರ ಪತ್ತೆಗೆ ಪಿರಿಯಾಪಟ್ಟಣ ಪೊಲೀಸರು ಮನವಿ ಮಾಡಿದ್ದಾರೆ.
ಮೃತ ದೇಹ ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿದ್ದು ವಾರಸುದಾರರು ಪತ್ತೆಯಾದಲ್ಲಿ ಪಿರಿಯಾಪಟ್ಟಣ ಪೊಲೀಸ್ ಠಾಣಾ ದೂರವಾಣಿ 08223 – 273100, 9480805058 ಸಂಪರ್ಕಿಸಲು ಇನ್ಸ್ಪೆಕ್ಟರ್ ಕೆ.ವಿ ಶ್ರೀಧರ್ ಕೋರಿದ್ದಾರೆ.