Sunday, April 20, 2025
Google search engine

Homeರಾಜ್ಯರಾಮನಗರ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಸಾವು

ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಸಾವು

ರಾಮನಗರ: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಖೈದಿಯೊಬ್ಬ ಮೃತಪಟ್ಟಿರುವ ಘಟನೆ ಮಂಗಳವಾರ(ಆ.17) ನಡೆದಿದೆ.

ಆಂಧ್ರ ಕುಪ್ಪಂ ಮೂಲದ ವಿಚಾರಣಾಧೀನ ಖೈದಿ ವೆಂಕಟೇಶ್ ಮೃತಪಟ್ಟವರು.

ಆನೆ ದಂತ ಕಳ್ಳತನ ಆರೋಪದ ಮೇಲೆ ಕನಕಪುರ ಅರಣ್ಯ ಇಲಾಖೆ ಅಧಿಕಾರಿಗಳು ಅ.11ರಂದು ಬಂಧಿಸಿದ್ದರು. ವಿಚಾರಣಾಧೀನ ಖೈದಿಯಾಗಿ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು.

ಸೋಮವಾರ ಹೊಟ್ಟೆ ನೋವು ಎಂದು ಆಸ್ಪತ್ರೆ ಸೇರಿಸಲಾಗಿತ್ತು ಎನ್ನಲಾಗಿದ್ದು, ಮೃತಪಟ್ಟಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

RELATED ARTICLES
- Advertisment -
Google search engine

Most Popular