ನಂಜನಗೂಡು:ಮೈಸೂರು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದ ಹತ್ತಿರ ಇರುವ ಮರದಲ್ಲಿ ಕಾರ್ಮೋರೆಂಟ್ (ನೀರು ಕಾಗೆ)ಹಾಗೂ ಈಗ್ರೇಟ್(ಬೆಳ್ಳಕ್ಕಿ) ಜಾತಿಯ ಪಕ್ಷಿಗಳು ಗೂಡನ್ನು ಕಟ್ಟಿ ಮರಿಗಳನ್ನು ಮಾಡಿದ್ದವು. ಅದೇ ಗ್ರಾಮದ ರವಿ ಬಿನ್ ದೇವಣ್ಣ ಎಂಬತಾನು ಕಿತ್ತು 24 ಮರಿಗಳನ್ನು ಸಾಯಿಸಿ 7 ಮರಿಗಳಿಗೆ ಗಾಯಗೊಳಿಸಿರುತ್ತಾನೆ, ಗಾಯಗೊಂಡ ಮರಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಕರಣದ ಬಗ್ಗೆ ಕೇಸ್ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದು ದಿನಾಂಕ 08-08-2023 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ RFO ಸುರೇಂದ್ರ. ಕೆ, DRFO ಮೋಹನ್ ಕುಮಾರ್, ಗಸ್ತು ಪಾಲಕ ರಾಜೇಗೌಡ, ಚಾಲಕ ಗಣೇಶ ಭಾಗವಹಿಸಿದ್ದರು.