ಮಂಡ್ಯ: ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಫಾರಂನ ಗೋಮಾಳದಲ್ಲಿದ್ದ ಮರಗಳ ಮಾರಣ ಹೋಮ ನಡೆಸಿದ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಂಧಿ ಗ್ರಾಮಕ್ಕೆ ಮೀಸಲಾದ ಜಮೀನಿನ ಪಕ್ಕದ ಸರ್ಕಾರಿ ಗೋಮಾಳದಲ್ಲಿದ್ದ 20ಕ್ಕೂ ಹೆಚ್ಚು ಬೃಹತ್ ಮರಗಳನ್ನು ಅಕ್ರಮವಾಗಿ ಕಡಿದು ಸಾಗಣೆ ಮಾಡಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಮರಗಳ ಕಟಾವಿಗೆ ಸ್ಥಳೀಯರು ಅಡ್ಡಿಪಡಿಸಿದ್ದಾರೆ.
ಪಂಚಾಯಿತಿ ಅಧ್ಯಕ್ಷ, ಸೆಕ್ರೇಟರಿ ಸಮ್ಮುಖದಲ್ಲೇ ಮರಗಳ ಹನನ ಮಾಡಲಾಗಿದೆ. ಪ್ರಶ್ನಿಸಿದ ಸ್ಥಳೀಯರ ವಿರುದ್ಧವೇ ಪಂಚಾಯತಿ ಅಧ್ಯಕ್ಷನ ದರ್ಪ, ದೌರ್ಜನ್ಯದ ಆರೋಪ ಮಾಡಲಾಗಿದೆ. ಹೆಚ್.ಮಲ್ಲಿಗೆರೆ ಗ್ರಾಪಂ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಚಿಕ್ಕಮರೀಗೌಡ ವಿರುದ್ಧ ಸ್ಥಳೀಯರ ಆಕ್ರೋಶ ಹೊರಹಾಕಿದ್ದು, ಆಕ್ರೋಶ ಹೆಚ್ಚಾಗ್ತಿದ್ದಂತೆ ಅಧ್ಯಕ್ಷ ಅಂಡ್ ಟೀಂ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಅರಣ್ಯ ಇಲಾಖೆ ಸೇರಿದಂತೆ ಯಾರಿಂದಲೂ ಅನುಮತಿ ಪಡೆಯದೆ ಮರಗಳ ಕಟಾವು, ಸಾಗಣೆ ಮಾಡಲಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು, ರೇಷ್ಮೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರ್ ಎಫ್‍ಓ ಚೈತ್ರಾ ನೇತೃತ್ವದಲ್ಲಿ ಸ್ಥಳ ಪರಿಶೀಲಿಸಿ, ಕಡಿದ ಮರಗಳ ಸರ್ವೇ ಮಾಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ ಆರ್ ಎಫ್‍ಓ ತಿಳಿಸಿದ್ದಾರೆ.