Friday, April 4, 2025
Google search engine

Homeದೇಶಎನ್‌’ಸಿಪಿ ಮುಖ್ಯಸ್ಥ ಶರದ್‌ ಪವಾರ್‌ಗೆ ಜೀವ ಬೆದರಿಕೆ: ಆರೋಪಿ ಬಂಧನ

ಎನ್‌’ಸಿಪಿ ಮುಖ್ಯಸ್ಥ ಶರದ್‌ ಪವಾರ್‌ಗೆ ಜೀವ ಬೆದರಿಕೆ: ಆರೋಪಿ ಬಂಧನ

ಮುಂಬಯಿ: ಎನ್‌ ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಪುಣೆ ಮೂಲದ ಸಾಗರ್‌ ಬರ್ವೆ(32) ಬಂಧಿತ ಆರೋಪಿ.

ಆರೋಪಿ ಶರದ್‌ ಪವಾರ್‌ ಅವರ ಮಗಳು ಸುಪ್ರಿಯಾ ಸುಳೆ ಅವರ ವಾಟ್ಸಾಪ್‌’ಗೆ ಸಂದೇಶವನ್ನು ಕಳುಹಿಸಿ ಜೀವ ಬೆದರಿಕೆಯನ್ನು ಹಾಕಿದ್ದ. ಈ ಸಂಬಂಧ ಸುಪ್ರಿಯಾ ಸುಳೆ ಮುಂಬೈ ಪೊಲೀಸರಿಗೆ ದೂರು ನೀಡಿ, ಮಹಾರಾಷ್ಟ್ರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಲ್ಲಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು.

ಫೇಸ್‌ ಬುಕ್‌ ನಲ್ಲಿ ನರೇಂದ್ರ ದಾಭೋಲ್ಕರ್ ಹತ್ಯೆಯನ್ನು ಉಲ್ಲೇಖಿಸಿ, ಶರದ್‌ ಪವಾರ್‌ ಅವರಿಗೆ ಜೀವ ಬೆದರಿಕೆಯ ಪೋಸ್ಟನ್ನು ಆರೋಪಿ ಹಾಕಿದ್ದ. ಈ ಸಂಬಂಧ ಲೋಕಮಾನ್ಯ ತಿಲಕ್ ಮಾರ್ಗ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ನೀಡಲಾಗಿತ್ತು, ಪೊಲೀಸರು ಐಪಿ ಅಡ್ರಸ್‌ ನ್ನು ಪತ್ತೆ ಮಾಡಿ ಆರೋಪಿ ಸಾಗರ್‌ ನನ್ನು ಬಂಧಿಸಿದ್ದಾರೆ.

ಟ್ವಿಟರ್‌ ನಲ್ಲೂ ಜೀವ ಬೆದರಿಕೆ ಬಂದಿದ್ದು, ಆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.  ಆರೋಪಿಯನ್ನು ಜೂ. 14 ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

RELATED ARTICLES
- Advertisment -
Google search engine

Most Popular