Friday, April 11, 2025
Google search engine

Homeರಾಜ್ಯಹಗರಣಗಳು, ಅಭಿವೃದ್ಧಿ ಶೂನ್ಯತೆಯ ಚರ್ಚೆ: ಬಿ.ವೈ.ವಿಜಯೇಂದ್ರ

ಹಗರಣಗಳು, ಅಭಿವೃದ್ಧಿ ಶೂನ್ಯತೆಯ ಚರ್ಚೆ: ಬಿ.ವೈ.ವಿಜಯೇಂದ್ರ

ಬೆಳಗಾವಿ: ರಾಜ್ಯದಲ್ಲಿರುವ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಉತ್ತರ ಕರ್ನಾಟಕದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಅಭಿವೃದ್ಧಿ ಶೂನ್ಯ ಸರಕಾರ ರಾಜ್ಯದಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕರ ಜೊತೆ ಈ ಕುರಿತಂತೆ ಚರ್ಚಿಸಿದ್ದೇವೆ. ಒಂದು ಕಡೆ ಸರಕಾರದ ಹಗರಣಗಳು, ಮತ್ತೊಂದು ಕಡೆ ಅಭಿವೃದ್ಧಿಯೇ ಇಲ್ಲದ ಸ್ಥಿತಿ ಇದೆ. ಆಡಳಿತ ಪಕ್ಷದ ಶಾಸಕರೇ ಈ ಶಾಸಕರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ತಿಳಿಸಿದರು.

ಮೇಲಿನ ವಿಚಾರಗಳ ಜೊತೆ ಉತ್ತರ ಕರ್ನಾಟಕದ ಅಭಿವೃದ್ಧಿಯೇ ಇಲ್ಲದ ಕುರಿತು ಇಂದಿನ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಪ್ರಕಟಿಸಿದರು. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಗೂ ಅವಕಾಶ ಇಲ್ಲವಾಗಿದೆ ಎಂದು ಅವರು ಇದೇವೇಳೆ ಆಕ್ಷೇಪಿಸಿದರು.

RELATED ARTICLES
- Advertisment -
Google search engine

Most Popular