ಮಂಡ್ಯ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಸಾಲ ಮತ್ತು ತನ್ನ ಅಕ್ರಮ ಸಂಬಂಧ ಬಯಲು ಹಿನ್ನಲೆ ಹೆಂಡತಿ ಮಕ್ಕಳಿಗೆ ವಿಷ ಉಣಿಸಿ ಬಳಿಕ ತಾನು ವಿಷ ಸೇವಿಸ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಇಂದು ಗುರುವಾರ ನೆಡೆದಿದೆ.
ಹೆಂಡತಿ ಕೀರ್ತನ(೨೩),ಮಕ್ಕಳಾದ ಜಯಸಿಂಹ(೦೪),ರಿಷಿಕಾ (೦೨) ಸಾವಿಗೀಡಾದವರು, ನರಸಿಂಹ ಹೆಂಡತಿ ಮಕ್ಕಳನ್ನು ಕೊಂದ ಪಾಪಿ ಗಂಡ ಐಪಿಎಲ್ ನಿಂದ ಸಾಕಷ್ಟು ಸಾಲ ಮಾಡಿಕೊಂಡಿದ್ದ, ಜೊತೆಗೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಈ ವಿಷಯ ಮನೆಯವರಿಗೆ ತಿಳಿದಿದ್ದರಿಂದ ಹೆಂಡತಿ ಮಕ್ಕಳಿಗೆ ವಿಷ ಹಾಕಿ ಹತ್ಯೆ ಮಾಡಿದ್ದಾನೆ. ಅವರ ಸಾವಿನ ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆ ಯತ್ನ, ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.