ತುಮಕೂರು:ಸಾಲದ ಸುಳಿಗೆ ಸಿಲುಕಿ ಖಾಸಗಿ ವಾಹಿನಿಯ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಪೀಣ್ಣೇನಹಳ್ಳಿಯ ವಾಸಿ ಶೀಲಾ ನಿರಂಜನ್ (39) ಆತ್ಮಹತ್ಯೆಗೆ ಶರಣಾದ ಮಹಿಳೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಪೀಣ್ಣೇನಹಳ್ಳಿ ಗ್ರಾಮದ ವಾಸಿ ಶೀಲಾ ನಿರಂಜನ್,ತಮ್ಮ ಜಮೀನಿನ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಒಂದು ತಿಂಗಳ ಹಿಂದೆ ಶೀಲಾ ತಂದೆ ಇದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ರು.ಶೀಲಾ ತಂದೆ ಮರಿಯಪ್ಪ ಕೂಡ ಸಾಲದ ಒತ್ತಡಕ್ಕೆ ನೇಣಿಗೆ ಶರಣಾಗಿದ್ದರು.ಶೀಲಾ ಮೇಲಿನ ಸಾಲ ತೀರಿಸಲು ತಂದೆ ಮರಿಯಪ್ಪ ಜಮೀನು ಮಾರಿ ಸ್ವಲ್ಪ ಮಟ್ಟಿನ ಸಾಲ ತೀರಿಸಿದ್ದರು.ಆದ್ರೂ ಪೂರ್ಣ ಸಾಲ ತೀರಿರಲಿಲ್ಲ. ಸಾಲಗಾರರ ಒತ್ತಡ ಹೆಚ್ಚಾಗಿತ್ತು.ಈ ಮಧ್ಯೆ ಕೆಲವೇ ದಿನಗಳ ಹಿಂದೆ ಶೀಲಾ ಖಾಸಗಿ ವಾಹಿನಿಯ ಕೆಲಸಕ್ಕೂ ರಾಜೀನಾಮೆ ನೀಡಿದ್ರು.ಕೆಲಸವಿಲ್ಲದೆ ಮನೆಯಲ್ಲೇ ಇದ್ರು, ಈ ಮಧ್ಯೆ ಸಾಲಗಾರರ ಒತ್ತಡ ಹೆಚ್ಚಾಗಿತ್ತು.ಸಾಲಗಾರರ ಒತ್ತಡ ತಾಳಲಾರದೆ ಇಂದು ಮಧ್ಯಾಹ್ನ ಆತ್ಮಹತ್ಯೆಗೆ ಶರಣಾಗಿದ್ದಾರೆ.ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.