ನವದೆಹಲಿ: ದೇಶದೊಳಗಿನ ಉಗ್ರ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಯುದ್ಧವೆಂದು ಪರಿಗಣಿಸಿ ತ್ವರಿತ ಹಾಗೂ ತೀವ್ರ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ನಡೆದ ಉನ್ನತ ಮಟ್ಟದ ಸೇನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಾಕಿಸ್ತಾನದ ದಾಳಿಯಲ್ಲಿ ಉದಂಪುರ್, ಪಟಾನ್ ಕೋಟ್, ಅದಂಪುರ್ ಹಾಗೂ ಬುಜ್ ನಗರಗಳಲ್ಲಿ ಹಾನಿಯಾಗಿದೆ. ಪ್ರತಿಕ್ರಿಯೆಯಾಗಿ ಭಾರತ ಪಾಕಿಸ್ತಾನದ ರಫಿಕಿ, ಮುರಿದ್, ಚಕ್ಲಾಲ, ರಹಿಂ ಯಾರ್ ಖಾನ್, ಸುಕ್ಕುರ್ ಹಾಗೂ ಚುನಿಯಾ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ಅಂತಾರಾಷ್ಟ್ರೀಯ ಕಾನೂನು ಪ್ರಕಾರ, ಉಗ್ರರು ಶಸ್ತ್ರಾಸ್ತ್ರದಿಂದ ದಾಳಿ ಮಾಡಿದರೆ ಅಥವಾ ಪ್ರಜೆಗಳನ್ನು ಅಪಹರಿಸಿದರೆ, ಯಾವುದೇ ದೇಶದ ಪ್ರತಿಕ್ರಿಯೆಯು ಯುದ್ಧದಂತೆ ಪರಿಗಣಿಸಲಾಗುತ್ತದೆ.