Sunday, May 25, 2025
Google search engine

Homeರಾಜಕೀಯಬಿಜೆಪಿ ಶಾಸಕರ ಅಮಾನತು ಹಿಂಪಡೆಯುವ ನಿರ್ಧಾರ: ಸ್ಪೀಕರ್ ಖಾದರ್

ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವ ನಿರ್ಧಾರ: ಸ್ಪೀಕರ್ ಖಾದರ್

ಬೆಂಗಳೂರು: ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯುಟಿ ಖಾದರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿವೇಶನ ಸಂದರ್ಭ ಸಂವಿಧಾನ ಪೀಠಕ್ಕೆ ಅಗೌರವ ತೋರಿದ ಕಾರಣ ಕ್ರಮ ಕೈಗೊಳ್ಳಲಾಗಿತ್ತು. ಆದರೆ ವಿಪಕ್ಷ ನಾಯಕರು, ನಾಯಕರ ಬೇಡಿಕೆಯ ಹಿನ್ನೆಲೆಯಲ್ಲಿ ಈ ವಿಷಯವನ್ನು ಪುನರ್‌ಪರಿಶೀಲನೆ ಮಾಡಲಾಗಿದೆ.

“ಅದು ಚರ್ಚೆಯ ನಡುವೆ ನಡೆದ ಘಟನೆ. ಚರ್ಚೆ ನಂತರ ಎಲ್ಲರೂ ಸೇರಿ ತೀರ್ಮಾನ ಕೈಗೊಂಡಿದ್ದೇವೆ. ಎರಡು ತಿಂಗಳು ಕಳೆದಿದ್ದು, ಸಾಕಷ್ಟು ಸಮಯವಾಗಿದೆ. ಶಾಸಕರು ನಮ್ಮ ಮಿತ್ರರು, ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ” ಎಂದರು.

ವಿಧಾನಸೌಧ ಗೈಡೆಡ್ ಟೂರ್ ಕುರಿತು ಮಾತನಾಡಿದ ಅವರು, ಈ ಪ್ರವಾಸದ ಉದ್ದೇಶ ಮಕ್ಕಳಿಗೆ ವಿಧಾನಸೌಧದ ಪರಂಪರೆ, ಇತಿಹಾಸ ತಿಳಿಸಿಕೊಡುವುದಾಗಿದೆ. ಹತ್ತನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಪ್ರವೇಶವಿದ್ದು, ಇತರರಿಗೆ ತಲಾ ₹50 ಶುಲ್ಕವಿದೆ. “ಯಾರ ಬಳಿಯಲ್ಲಿ ಫೋನ್ ಇಲ್ಲವೋ ಅವರಿಂದ ಹಣ ಕೇಳುವುದಿಲ್ಲ” ಎಂದು ಅವರು ಹಾಸ್ಯಭರಿತವಾಗಿ ಹೇಳಿದರು.

RELATED ARTICLES
- Advertisment -
Google search engine

Most Popular