Friday, April 4, 2025
Google search engine

Homeಸ್ಥಳೀಯಪತ್ರಿಕೆಗಳನ್ನು ಓದುವವರ ಸಂಖ್ಯೆ ಇಳಿಮುಖ: ಸುತ್ತೂರು ಶ್ರೀಗಳು ಬೇಸರ

ಪತ್ರಿಕೆಗಳನ್ನು ಓದುವವರ ಸಂಖ್ಯೆ ಇಳಿಮುಖ: ಸುತ್ತೂರು ಶ್ರೀಗಳು ಬೇಸರ

ಪತ್ರಕರ್ತರ ಕ್ಯಾಲೆಂಡರ್,ಡೈರಿ ಬಿಡುಗಡೆ, ಸಾಧಕ ಪತ್ರಕರ್ತರಿಗೆ ಅಭಿನಂದನಾ ಸಮಾರಂಭ

ಮೈಸೂರು: ಇಂದಿನ ದಿನಮಾನಗಳಲ್ಲಿ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಸುತ್ತೂರು ಶ್ರೀಕ್ಷೇತ್ರದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಇಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆಶಯದಲ್ಲಿ ನೂತನ ವರ್ಷದ ಕ್ಯಾಲೆಂಡರ್, ಡೈರಿ ಬಿಡುಗಡೆ ಹಾಗೂ ಸಾಧಕ ಪತ್ರಕರ್ತರಿಗೆ ನಡೆದ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಸುತ್ತೂರು ಶ್ರೀಗಳು ಮಾತನಾಡಿದರು. ದಿನಪತ್ರಿಕೆಗಳನ್ನು ಇಂದು ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ ಪತ್ರಿಕೆ ಓದುವುದರಿಂದ ಸಿಗುವ ಜ್ಞಾನಾರ್ಜನೆ ಯಾವುದರಿಂದಲೂ ದೊರೆಯುವುದಿಲ್ಲ ಎಂದು ಈ ಸಂದರ್ಭದಲ್ಲಿ ಸ್ವಾಮೀಜಿ ನುಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಅವರು ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ಹಿರಿಯ ಪತ್ರಕರ್ತರ ಮಾರ್ಗದರ್ಶನದಲ್ಲಿ ಕಿರಿಯ ಪತ್ರಕರ್ತರು ಸಾಗಬೇಕು. ಮೈಸೂರಿನ ಪತ್ರಿಕೋದ್ಯಮಕ್ಕೆ ಮತ್ತಷ್ಟು ಕೀರ್ತಿ ತರುವ ಕಾರ್ಯ ಕಿರಿಯ ಪತ್ರಕರ್ತರಿಂದ ಆಗಲಿ ಎಂದು ಹೇಳಿದರು .ನಾಡಿನ ಹೇಳಿಕೆಗಾಗಿ ಮಾಧ್ಯಮ ಸಾಕಷ್ಟು ಶ್ರಮಿಸುತ್ತಿದೆ ಪತ್ರಿಕೋದ್ಯಮ ಬದಲಾಗುತ್ತಿದೆ ಹಿಂದಿನ ಕಾಲದ ಪತ್ರಿಕೋದ್ಯಮಕ್ಕೂ ಈ ದಿನ ಕಾಲದ ಪತ್ರಿಕೋದ್ಯಮಕ್ಕೂ ಬಹಳ ವ್ಯತ್ಯಾಸವಿದೆ ಎಂದು ಜಿಟಿ ದೇವೇಗೌಡ ಅಭಿಪ್ರಾಯ ಪಟ್ಟರು.

ಸಿದ್ಧಾರ್ಥ ಗ್ರೂಪ್ಸ್ ಮುಖ್ಯಸ್ಥರಾದ ಶ್ರೀ ಪಿ.ವಿ.ಗಿರಿ ಅವರು ಡೈರಿ ಬಿಡುಗಡೆ ಮಾಡಿ ಮಾತನಾಡಿ, ಮನೆಗಳಲ್ಲಿ ಪೋಷಕರು ಈ ಹಿಂದೆ ತಮ್ಮ ಮಕ್ಕಳಿಗೆ ಪತ್ರಿಕೆಗಳನ್ನು ಓದಿ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕು ಎಂದು ಹೇಳುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಕಲಹದ ವರದಿಗಳನ್ನು ನೋಡಿದರೆ ಓದುವ ಆಸಕ್ತಿ ಕುಗ್ಗಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಸರಕಾರದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪಡೆದ ಶ್ರೀ ಚಿ.ಜ. ರಾಜೀವ್, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಟಿ. ಗುರುರಾಜ್, ಶ್ರೀ ಜೆ. ಜಯಂತ್, ಶ್ರೀಮತಿ ಶಿಲ್ಪಾ. ಪಿ. ಹಾಗೂ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತರಾದ
ದಯಾಶಂಕರ ಮೈಲಿ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಡಾ.ಶಿವಕುಮಾರ್ ಅವರು ಹಾಗೂ ಪಿ.ಹೆಚ್.ಡಿ ಪದವಿ ಪಡೆದ ಶ್ರೀ ನಾಗರಾಜ್ ನವೀಮನೆ, ಬನ್ನೂರು ರಾಜು ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು .

ಸನ್ಮಾನಿತರ ಪರವಾಗಿ ಈ ಗುರುರಾಜ್ ಅವರು ಮಾತನಾಡಿ, ಹೊಸ ತಲೆಮಾರಿನ ಪತ್ರಕರ್ತರಿಗೆ ಅಹಂಕಾರ ಹೆಚ್ಚಾಗಿದ್ದು ಓದು ಕಡಿಮೆಯಾಗಿ ಬರವಣಿಗೆಯಲ್ಲಿ ಮುಂದುವರಿಯುತ್ತೇನೆ ಎಂದುಕೊಂಡಿದ್ದಾರೆ ಆದರೆ ಇದು ಮೂರ್ಖತನ. ಅತಿ ಹೆಚ್ಚು ಓದಬೇಕು ಅದರಂತೆ ಬರೆಯುವುದನ್ನು ನಾವು ರೂಢಿಗತ ಮಾಡಿಕೊಂಡಾಗ ಮಾತ್ರ ಉತ್ತಮ ಪತ್ರಕರ್ತನಾಗಲು ಸಾಧ್ಯ ಎಂದು ತಿಳಿಸಿದರು .

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ ದೀಪಕ್ ಹಾಗೂ ಪ್ರಧಾನ ಕಾರ್ಯದರ್ಶಿ ಧರ್ಮಪುರ ನಾರಾಯಣ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular